ಬಸ್ ಡಿಕ್ಕಿ : ಬೈಕ್ ಸವಾರ ದುರ್ಮರಣ : ತಾಳತ್ತಮನೆಯಲ್ಲಿ ಘಟನೆ

January 17, 2021

ಮಡಿಕೇರಿ ಜ.17 : KSRTC ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ತಾಳತ್ತಮನೆ ಸಮೀಪ ನಡೆದಿದೆ.
ಮದೆನಾಡು ಗ್ರಾಮದ ನಿವಾಸಿ ದಯಾನಂದ (ಚಿಮ್ಮಿ) ಎಂಬುವವರ ಪುತ್ರ ಕೀರ್ತನ್ (25) ಮೃತ ದುರ್ದೈವಿ. ಘಟನೆ ನಡೆದ ತಕ್ಷಣ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತ್ತಾದರೂ ಮಾರ್ಗ ಮಧ್ಯದಲ್ಲಿ ಅವರು ದುರ್ಮರಣಕ್ಕೀಡಾಗಿದ್ದಾರೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!