ರಾಮಮಂದಿರ ನಿರ್ಮಾಣವಾಗಲಿ, ಆದರೆ ಬಿಜೆಪಿ ಮಂದಿರವಾಗಬಾರದು : ಎಂಎಲ್‍ಸಿ ವೀಣಾಅಚ್ಚಯ್ಯ ಒತ್ತಾಯ

January 18, 2021

ಮಡಿಕೇರಿ ಜ.18 : ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಸಂದರ್ಭ ಆರ್‍ಎಸ್‍ಎಸ್ ಮತ್ತು ಬಿಜೆಪಿ ಧ್ವಜವನ್ನು ಬಳಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುವುದು ಎಲ್ಲರ ಅಪೇಕ್ಷೆಯಾಗಿದೆ, ಕಾಂಗ್ರೆಸ್ ಕೂಡ ಇದನ್ನು ಸ್ವಾಗತಿಸುತ್ತದೆ. ಇದೊಂದು ಹಿಂದೂ ರಾಷ್ಟ್ರವಾಗಿದ್ದು, ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ಆದರೆ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆ ಇಳಿದಿರುವವರು ಆರ್‍ಎಸ್‍ಎಸ್ ಮತ್ತು ಬಿಜೆಪಿ ಧ್ವಜವನ್ನು ಬಳಸುತ್ತಿರುವುದು ಸರಿಯಾದ ಕ್ರಮವಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆ ಹೊರತು ಬಿಜೆಪಿ ಮಂದಿರವಾಗಬಾರದು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.

error: Content is protected !!