ಜ. 24ರಂದು ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್

January 18, 2021


ಮಡಿಕೇರಿ ಜ. 18 : ಮಕ್ಕಂದೂರು ಗ್ರಾಮದ ಯುವಕರ ತಂಡ ಸೇರಿಕೊಂಡು ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ತಾ. 24ರಂದು ಮಕ್ಕಂದೂರುವಿನಲ್ಲಿ ನಡೆಯಲಿದೆ.
ಪಂದ್ಯಾಟದ ಅಂಗವಾಗಿ ಅಂದು ಬೆಳಿಗ್ಗೆ 7ಗಂಟೆಗೆ ಸ್ವಚ್ಛತಾ ಕಾರ್ಯ ಏರ್ಪಡಿಸಲಾಗಿದ್ದು, ಪಂಚಾಯ್ತಿ ಅಧಿಕಾರಿ ಎಸ್.ಎಸ್.ದಿನೇಶ್ ಚಾಲನೆ ನೀಡುವರು. ಅತಿಥಿಯಾಗಿ ಪತ್ರಕರ್ತ ಕುಡೆಕಲ್ ಸಂತೋಷ್ ಉಪಸ್ಥತರಿರುವರು.
ನಂತರ ನಡೆಯುವ ಪಂದ್ಯಾವಳಿಯನ್ನು ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ರವಿಕಾಳಪ್ಪ, ಗ್ರಾ.ಪಂ.ಸದಸ್ಯ ಬಿ.ಎನ್. ರಮೇಶ್, ಭದ್ರಕಾಳೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕುಂಬಗೌಡನ ಉತ್ತಪ್ಪ ಅವರುಗಳು ಉದ್ಘಾಟಿಸಲಿದ್ದಾರೆ.

ಅಥಿತಿಗಳಾಗಿ ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಲಕ್ಕಪ್ಪನ ಕಾವೇರಮ್ಮ ಹರೀಶ್, ಕುಂಬಗೌಡನ ಮಧುಗೋಪಾಲ, ಸಹಕಾರ ಸಂಘದ ಅದ್ಯಕ್ಷ ಕೊಕ್ಕಲೆರ ಸುಜುತಿಮ್ಮಯ್ಯ, ಸುಬ್ರಹ್ಮಣ್ಯ ದೇವಾಲಯ ಸಮಿತಿ ಅಧ್ಯಕ್ಷ ಕುಂಬಗೌಡನ ಅರವಿಂದ್, ಮಾಜಿ ಸೈನಿಕರುಗಳಾದ ಚೌಕೀರ ರಘುತಿಮ್ಮಯ್ಯ, ಬಿ.ಎಸ್.ವಿಜಯ ಅವರುಗಳು ಪಾಲ್ಗೊಳ್ಳುವರೆಂದು ಆಯೋಜಕರು ತಿಳಿಸಿದ್ದಾರೆ.

error: Content is protected !!