ಕುಶಾಲನಗರದಲ್ಲಿ ರೋಮನ್ ಕ್ಯಾಥೋಲಿಕ್ ಅಸೋಶಿಯನ್‍ನಿಂದ ಗ್ರಾ.ಪಂ ಸದಸ್ಯರಿಗೆ ಸನ್ಮಾನ

January 18, 2021

ಸುಂಟಿಕೊಪ್ಪ,ಜ.18: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯನ್ ವತಿಯಿಂದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಕುಶಾಲನಗರದ ಮಿಸ್ಟ್‍ಪ್ಲವರ್ ಭವನದಲ್ಲಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯನ್ ಅಧ್ಯಕ್ಷರಾದ ಎಸ್.ಎಂ.ಡಿಸಿಲ್ವಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಯಿತು. ಇದೇ ಸಂದರ್ಭ ಸಂಘದ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎಫ್.ಸಬಾಸ್ಟೀನ್ ಸುಂಟಿಕೊಪ್ಪ,ಉಪಾಧ್ಯಕ್ಷ ಜಾನ್ಸನ್ ಪಿಂಠೋ ಮಡಿಕೇರಿ, ಸಾಂಸ್ಕøತಿಕ ಕಾರ್ಯದರ್ಶಿ ಪಿಲೋಮಿನಾ ಕೂಡಿಗೆ ಅವರುಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ಲಾರೆನ್ಸ್, ಉಪಾಧ್ಯಕ್ಷ ಜೋಕಿಂವಾಸ್, ಖಜಾಂಜಿ ರಾಯ್, ಸಂಘಟನಾ ಕಾರ್ಯದರ್ಶಿ ಮೆರ್ವಿನ್‍ಲೋಬೊ, ಸಹಕಾರ್ಯದರ್ಶಿ ವಿನ್ಸಿ ಡಿಸೋಜ,ಸಲಹೆಗಾರರಾದ ಪಿಲಿಪ್‍ವಾಸ್, ಸದಸ್ಯರುಗಳಾದ ಪೀಟರ್,ಸಿಲ್ವಿಸ್ಟರ್ ಡಿಸೋಜ ಹಾಗೂ ಜೋಸೆಫ್ ಮತ್ತಿತರರು ಇದ್ದರು.

error: Content is protected !!