‘ನಮ್ಮ ಸುಂಟಿಕೊಪ್ಪ’ ಫೇಸ್‍ಬುಕ್ ಬಳಗದ 4ನೇ ವರ್ಷದ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ

January 18, 2021

ಸುಂಟಿಕೊಪ್ಪ,ಜ.18: ‘ನಮ್ಮ ಸುಂಟಿಕೊಪ್ಪ’ ಫೇಸ್‍ಬುಕ್ ಬಳಗದ ವತಿಯಿಂದ 4ನೇ ವಾರ್ಷಿಕೋತ್ಸವ ಹಾಗೂ ಪದಗ್ರಣ ಸಮಾರಂಭ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾದರ್ ಅರುಳ್ ಸೆಲ್ವಕುಮಾರ್ ಆರ್ಶಿವಚನ ನೀಡಿ ನಮ್ಮ ಸುಂಟಿಕೊಪ್ಪ ಬಳಗವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ನಿರತವಾಗಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಸುಂಟಿಕೊಪ್ಪ ಬಳಗದ ಜಾಹೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ರಂಜಿತ್ ಕುಮಾರ್ ನೂತನ ಅಧ್ಯಕ್ಷರಾದ ಡೆನ್ನಿಸ್ ಡಿಸೋಜ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಸುಂಟಿಕೊಪ್ಪದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಂದಿಗೆ ಬಳಗದ ಸ್ಟಾರ್ ಆಫ್ ಸುಂಟಿಕೊಪ್ಪ ಎಂಬ ಬಿರುದನ್ನು ನೀಡಲಾಗುತ್ತಿದೆ.
ಈ ಪ್ರಶಸ್ತಿಗೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹೊಯ್ಸಳ, ಹಳೆಯ ಕಾಲದ ನೋಟು, ನಾಣ್ಯಗಳು, ಅಂಚೆಸ್ಟಾಪ್ ಇನ್ನಿತರರ ವಸ್ತುಗಳನ್ನು ಶೇಖರಣೆಗಾಗಿ ವಿಜಯಕುಮಾರ್, ಕ್ರೀಡಾ ಕ್ಷೇತ್ರದಲ್ಲಿ ಇಬ್ರಾಹಿಂ, ವೈಯಕ್ತಿಕ ಪ್ರತಿಭೆ ಹಾಗೂ ಮಕ್ಕಳ ಪ್ರತಿಭೆಗಳನ್ನು ಹುಟ್ಟುಹಾಕುವಲ್ಲಿ ತೊಡಗಿಸಿಕೊಂಡಿರುವ ನೃತ್ಯ ತರಬೇತುದಾರ ಆಶ್ವಿನ್‍ಡಿಸೋಜ ಅವರುಗಳನ್ನು ಈ ಸಂದರ್ಭದಲ್ಲಿ ನಮ್ಮ ಸುಂಟಿಕೊಪ್ಪ ಬಳಗದ ವತಿಯಿಂದ ಊರಿನ ಪ್ರಮುಖರಾದ ವಿಟ್ಲದ ಮಾಜಿಶಾಸಕರಾದ ಕೆ.ಎಂ.ಇಬ್ರಾಹಿಂ, ಕೆ.ಡಿ.ರಾಮಯ್ಯ, ಲೀಲಾ ಮೇದಪ್ಪ,ಜಿ.ಎಲ್.ರಮೇಶ್ ಇವರುಗಳು ಸನ್ಮಾನಿಸಿ,ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ.ಎಸ್.ಅನಿಲ್, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ರಮೇಶ್,ಕಾರ್ಯದರ್ಶಿ ಮುರುಗೇಶ್, ವಹೀದ್‍ಜಾನ್, ಬಿ.ಡಿ.ರಾಜು ರೈ, ಹಕೀಂ, ನಿರಂಜನ್, ಫೆಲ್ಸಿ ಡೆನ್ನಿಸ್, ರೇಖಾ, ಸೇಲ್ವಿ ಮತ್ತಿತರರು ಇದ್ದರು.

error: Content is protected !!