ನಂದಿನೆರವಂಡ ಐನ್‍ಮನೆಗೆ ತೆರಳುವ ಕಾಂಕ್ರಿಟ್ ರಸ್ತೆ ಉದ್ಘಾಟನೆ

January 18, 2021

ಮಡಿಕೇರಿ ಜ.18 : ಬೋಯಿಕೇರಿಯ ನಂದಿನೆರವಂಡ ಐನ್‍ಮನೆಗೆ ತೆರಳುವ ನೂತನ ಕಾಂಕ್ರಿಟ್ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರ ಅನುದಾನ ರೂ.2 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಂಡಿದೆ. ಇದೇ ಸಂದರ್ಭ ನಂದಿನೆರವಂಡ ಕುಟುಂಬಸ್ಥರು ವೀಣಾಅಚ್ಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.
ನಂದಿನೆರವಂಡ ಕುಟುಂಬದ ಪಟ್ಟೆದಾರ ಎನ್.ಎಂ.ಅಪ್ಪಣ್ಣ, ಉಪಾಧ್ಯಕ್ಷ ಎನ್.ಕೆ.ನಂದ, ಪ್ರಮುಖರಾದ ನಂದಿನೆರವಂಡ ಗಣೇಶ್, ಎನ್.ಎಂ. ದಿನೇಶ್, ಶಾಂತಿ ಪಳಂಗಪ್ಪ, ರವಿ ಕುಟ್ಟಪ್ಪ, ಮಧು, ಡಾ. ಎನ್.ಎ. ಪ್ರಕಾಶ್, ಎನ್.ಜಿ. ಅಯ್ಯಪ್ಪ ಹಾಗೂ ಕುಟುಂಬಸ್ಥರು ಹಾಜರಿದ್ದರು.

error: Content is protected !!