ಲೇಖನ, ಕವನ, ಕಥೆ ಆಹ್ವಾನ

January 18, 2021

ಮಡಿಕೇರಿ ಜ.18 : ಕೊಡಗು ಜಿಲ್ಲಾ 15 ನೇ ಸಾಹಿತ್ಯ ಸಮ್ಮೇಳನ ಮತ್ತು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಮಾರಂಭವು ಜನವರಿ, 29 ಮತ್ತು 30 ರಂದು ನಗರದ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದೆ. ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕøತಿಗೆ ಸಂಬಂಧಿಸಿದ ಲೇಖನ, ಕವನ, ಕಥೆ ಮೊದಲಾದ ಬರವಣಿಗೆಗಳನ್ನು ಆಹ್ವಾನಿಸಲಾಗಿದೆ.
ಆsಸಕ್ತ ಬರವಣಿಗೆಗಾರರು ತಮ್ಮ ಬರವಣಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರ ಕಚೇರಿಗೆ ಮತ್ತು ಸಾಫ್ಟ್ ಪ್ರತಿಯನ್ನು ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕರಾದ ಕೆ.ಸಿ.ದಯಾನಂದ ಅವರ ಇ-ಮೇಲ್- dayanandakudakandi@gmail.com ಗೆ ಕಳುಹಿಸಿಕೊಡುವಂತೆ ತಿಳಿಸಿದೆ. ಬರಹಗಳು ತಮ್ಮ ಸ್ವಂತದಾಗಿರಲಿ ಮತ್ತು ಪ್ರಕಟಣೆಗೆ ಯೋಗ್ಯವಾದ ಬರವಣಿಗೆಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ದಯಾನಂದ ಕೆ.ಸಿ. ಅವರ ಮೊಬೈಲ್ ಸಂಖ್ಯೆ 9449766772 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.

error: Content is protected !!