ಫೀ.ಮಾ.ಕಾರ್ಯಪ್ಪ ಜನ್ಮದಿನ : ಪ್ರಬಂಧ, ಚಿತ್ರಕಲೆ ಸ್ಪರ್ಧೆ ವಿಜೇತರ ವಿವರ

18/01/2021

ಮಡಿಕೇರಿ ಜ.18 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122 ನೇ ಜನ್ಮ ದಿನೋತ್ಸವದ ಪ್ರಯುಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯು ಸೋಮವಾರ ಅಕಾಡೆಮಿ ಕಚೇರಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಕಸ್ತೂರಿ ಗೋವಿಂದಮ್ಮಯ್ಯ ಹಾಗೂ ಚಿತ್ರಕಲೆಯ ತೀರ್ಪುಗಾರರಾಗಿ ರೂಪೇಶ್ ಹಾಗೂ ಪ್ರಸನ್ನ ಕುಮಾರ್ ಅವರು ಭಾಗವಹಿಸಿದ್ದರು.
ವಿಜೇತರಾದ ವಿದ್ಯಾರ್ಥಿಗಳ ವಿವರ ಇಂತಿದೆ. ಪ್ರಬಂಧ ಸ್ಪರ್ಧೆಯಲ್ಲಿ ಚೇರಂಬಾಣೆ ರಾಜರಾಜೇಶ್ವರಿ ಶಾಲೆಯ ಕೆ.ಟಿ.ಬಿದ್ದಪ್ಪ (ಪ್ರಥಮ), ಪಿ.ಪಿ.ಕರುಂಬಯ್ಯ (ದ್ವಿತೀಯ), ವಿರಾಜಪೇಟೆ ಪ್ರಗತಿ ಶಾಲೆಯ ಕೆ.ಪಿ.ಚಂಗಪ್ಪ (ತೃತೀಯ), ಚೇರಂಬಾಣೆ ರಾಜರಾಜೇಶ್ವರಿ ಶಾಲೆಯ ಪುನೀತ ಸಿ. ಗಣಪತಿ (ತೃತಿಯ) ಸ್ಥಾನ ಪಡೆದಿದ್ದಾರೆ.
ಚಿತ್ರಕಲೆ ಸ್ಪರ್ಧೆಯಲ್ಲಿ ವಿಚೇತರಾದವರ ವಿವರ: ಸುಂಟಿಕೊಪ್ಪ ಸ್ವಸ್ಥ ಶಾಲೆಯ ಎಂ.ಕೆ.ರಾಜೇಶ್ವರಿ (ಪ್ರಥಮ), ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಕುಶಾನ್ ಎ.ಎಲ್. (ದ್ವಿತೀಯ), ನಗರದ ಸಂತ ಜೋಸೆಫರ ಶಾಲೆಯ ಮಿಥಿಲ ಟಿ.ಎಂ.(ತೃತೀಯ) ಮತ್ತು ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಿ.ಹರ್ಷಿಣಿ ಪ್ರದೀಪ್ (ಸಮಧಾನಕರ), ಮೂರ್ನಾಡು ಮಾರುತಿ ಶಾಲೆಯ ಸಲೀನ ಕೆ.ಎಸ್.(ಸಮಧಾನಕರ) ಮತ್ತು ಸೋಮವಾರಪೇಟೆ ಒಎಲ್‍ವಿ. ಶಾಲೆಯ ಎನ್.ಜೆ.ಮನಶ್ರೀ (ಸಮಧಾನಕರ ಬಹುಮಾನ) ಪಡೆದಿದ್ದಾರೆ.
ಈ ವಿದ್ಯಾರ್ಥಿಗಳು ಜನವರಿ, 28 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಪತ್ರಿಕಾಭವನದಲ್ಲಿ ನಡೆಯುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯಲಿದ್ದಾರೆ ಎಂದು ಕರ್ನಾಟಕ ಕೊಡವ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.