ಕೋವಿಡ್ ಲಸಿಕೆ ಅಭಿಯಾನ : ಕೊಡಗಿನಲ್ಲಿ 2 ನೇ ದಿನ ಶೇ.61.1 ರಷ್ಟು ಸಾಧನೆ

January 18, 2021

ಮಡಿಕೇರಿ ಜ.18 : ಕೋವಿಡ್-19 ಲಸಿಕಾ ಅಭಿಯಾನ 2ನೇ ದಿನವಾದ ಸೋಮವಾರ ನಗರದ ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗಳಲ್ಲಿ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 2,050 ರ ಗುರಿಯಲ್ಲಿ 1,253 ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ.61.1 ರಷ್ಟು ಸಾಧಿಸಲಾಗಿದೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ 548 ಗುರಿಯಲ್ಲಿ 429 ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ.78.3 ರಷ್ಟು ಸಾಧನೆ, ಸೋಮವಾರಪೇಟೆ ತಾಲ್ಲೂಕಿನ ತಾಲ್ಲೂಕು ಆಸ್ಪತ್ರೆಯಲ್ಲಿ 453 ಗುರಿಯಲ್ಲಿ 339 ಮಂದಿಗೆ ಲಸಿಕೆ ನೀಡಲಾಗಿದ್ದು, ಶೇ.74.8 ರಷ್ಟು ಸಾಧನೆ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 1,049 ಗುರಿಯಲ್ಲಿ 485 ಮಂದಿಗೆ ಲಸಿಕೆ ನೀಡಲಾಗಿದ್ದು, 46.2 ರಷ್ಟು ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

error: Content is protected !!