ಭರತನಾಟ್ಯ ಪರೀಕ್ಷೆಯಲ್ಲಿ ತುಶಾಲಿ ಕೊಡಗಿಗೆ ಪ್ರಥಮ

January 18, 2021

ಮಡಿಕೇರಿ ಜ.18 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕಿರಿಯ ದರ್ಜೆ ಭರತನಾಟ್ಯ ಪರೀಕ್ಷೆಯಲ್ಲಿ ಶೇಕಡ 92.5 ಅಂಕ ಗಳಿಸುವ ಮೂಲಕ ವಿದ್ಯಾರ್ಥಿನಿ ಅಪ್ಪಂಡೇರಂಡ ತುಶಾಲಿ ಎಲ್ ಅವರು ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಶ್ರೀನಾಟ್ಯ ಗಣಪತಿ ಸಂಗೀತ ನೃತ್ಯ ಕಲಾ ಕೇಂದ್ರದ ಗುರುಗಳಾದ ವಿದೂಷಿ ವಿಜಯಲಕ್ಷ್ಮಿ ಹಾಗೂ ವಿದೂಷಿ ನಂದಿನಿ ಅವರಿಂದ ನಾಟ್ಯ ಕಲೆ ಕಲಿತಿರುವ ತುಶಾಲಿ ಅವರು ಕ್ರೀಡಾ ಕ್ಷೇತ್ರದಲ್ಲೂ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಅಪ್ಪಂಡೇರಂಡ ತುಶಾಲಿ ಎಲ್ ಅವರು ವಿರಾಜಪೇಟೆ ನಗರದ ನಿವಾಸಿ ದೇವಕ್ಕಿ ಕೆ.ಎಂ (ವಾಣಿ) ಅವರ ಪುತ್ರಿಯಾಗಿದ್ದು, ಪ್ರಸ್ತುತ ಸಂತ ಅನ್ನಮ್ಮ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಾರೆ.

error: Content is protected !!