ಕುಶಾಲನಗರದಲ್ಲಿ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ರಿಗೆ ಸನ್ಮಾನ

January 19, 2021

ಮಡಿಕೇರಿ ಜ. 19 : ಕೊಡಗಿನ ಕುಶಾಲನಗರದ ಎಸ್.ಎಸ್. ನಕುಲ್ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ತಮ್ಮ ಸೇವೆಯ ಅವಧಿಯಲ್ಲಿ ಮಾದರಿ ಜಿಲ್ಲಾಧಿಕಾರಿಯಾಗಿ ಖಾತಿ ಪಡೆದಿದ್ದು, ಇವರ ಕರ್ತವ್ಯದ ನಿಷ್ಠೆ ಮತ್ತು ಪ್ರಮಾಣಿಕತೆಯನ್ನು ಗಮನಿಸಿ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿದ್ದಾರೆ.
ಕುಶಾಲನಗರದ ಉದ್ಯಮಿ ಹಾಗೂ ಸಮಾಜ ಸೇವಕ ಎಸ್. ಕೆ. ಸತೀಶ್ ದಂಪತಿಗಳ ಪುತ್ರ ಎಸ್.ಎಸ್. ನಕುಲ್ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿರುವ ಹಿನ್ನೆಲೆ ಕುಶಾಲನಗರದ ಆರ್ಯವೈಶ್ಯ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆರ್ಯವೈಶ್ಮ ಮಂಡಳಿಯ ಅಧ್ಯಕ್ಷ ವಿ.ಪಿ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರದಲ್ಲಿ ಉದ್ಯಮಿ ನಾಗೇಂದ್ರ ಪ್ರಸಾದ್, ಬಿಜೆಪಿ ಮುಖಂಡ ಜಿ.ಎಲ್. ನಾಗರಾಜ್, ಗಣಪತಿ ದೇವಾಲಯದ ಅಧ್ಯಕ್ಷ ವಸಂತ್ ಕುಮಾರ್, ಕನ್ನಿಕಾ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್, ವಕೀಲ ನಾಗೇಂದ್ರ ಬಾಬು, ಜೋಸೆಪ್ ವಿಕ್ಟರ್, ಸತೀಶ್, ಅಕುಲ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿಯ ಸದಸ್ಯರು, ಸಮಾಜದ ಪ್ರಮುಖರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

error: Content is protected !!