ಪೇರೂರು ಮಂಜಾಟ್ ಕಾಲೋನಿಗೆ ಮೂಲಭೂತ ಸೌಲಭ್ಯ ನೀಡಲು ಒತ್ತಾಯ

January 19, 2021

ಮಡಿಕೇರಿ ಜ.19 : ಮಡಿಕೇರಿ ತಾಲ್ಲೂಕಿನ ಪೇರೂರು ಮಂಜಾಟ್ ಪರಿಶಿಷ್ಟರ ಕಾಲೋನಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂದರ್ಭ ಕೆಲವರು ಅಡ್ಡಿಪಡಿಸಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಬುಡಕಟ್ಟು ಕೃಷಿಕರ ಸಂಘದ ಮಡಿಕೆÉೀರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲೆ ತಲಾಂತರಗಳಿಂದ ಈ ಕಾಲೋನಿಯಲ್ಲಿ ವಾಸವಿರುವ ಬಡ ಜನತೆಗೆ ರಸ್ತೆ, ಶುದ್ಧ ಕುಡಿಯವ ನೀರು, ವಿದ್ಯುಚ್ಛಕ್ತಿ ಮತ್ತು ಅರಣ್ಯ ಹಕ್ಕು ಪತ್ರ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಇದಕ್ಕೆ ಪೂರಕವಾಗಿ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳ ಪರ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಅಧಿಕಾರಿಗಳು ಕೂಡ ಮೂಲಭೂತ ಸೌಲಭ್ಯಕ್ಕೆ ತಕರಾರು ಇಲ್ಲವೆಂದು ಭರವಸೆ ನೀಡಿದ್ದರು. ಆದರೆ, ರವಿಕುಶಾಲಪ್ಪ ಅವರನ್ನು ಗುರಿಯಾಗಿಸಿಕೊಂಡು ಅವರದೇ ಪಕ್ಷದವರು ಅಧಿಕಾರ ದುರುಪಯೋಗದ ಆರೋಪ ಹೊರಿಸಿ ಮೂಲಭೂತ ಸೌಲಭ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟರ ಕಾಲೋನಿ ಸಿ ಮತ್ತು ಡಿ ಭೂಮಿಯಾಗಿದೆಯೇ ಹೊರತು ಮೀಸಲು ಅರಣ್ಯವಲ್ಲ. ಕಾನೂನಿನ ಪ್ರಕಾರ ಇಲ್ಲಿರುವ ಎಲ್ಲಾ ನಿವಾಸಿಗಳಿಗೆ ಸರ್ಕಾರದ ಸೌಲಭ್ಯ ನೀಡಲು ಅವಕಾಶವಿದೆ. ಆದರೆ, ಕೆಲವರು ಕ್ಷುಲ್ಲಕ ಕಾರಣಕ್ಕಾಗಿ ಎಲ್ಲದಕ್ಕೂ ಅಡ್ಡಿ ಪಡಿಸುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಲ್ಲದೆ, ಮೂಲ ಸೌಲಭ್ಯ ದೊರೆಯದಿದ್ದಲ್ಲಿ ಮಡಿಕೆÉೀರಿ ಅರಣ್ಯ ಭವನದ ಎದುರು ಮತ್ತು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಮುತ್ತಪ್ಪ ಎಚ್ಚರಿಕೆ ನೀಡಿದರು.
ಒಂದು ಶತಮಾನದ ಹಿದೆಯೇ ಇಲ್ಲಿ ವಾಸವಾಗಿರುವ ಮಂದಿಗೆ ಮೂಲ ಸೌಲಭ್ಯ ನೀಡದೆ ಸತಾಯಿಸಲಾಗುತ್ತಿದ್ದು, ನಾವೇನು ಪಾಕಿಸ್ತಾನದಿಂದ ಬಂದವರೇ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೋನಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷÀ ಪಿ.ಎಂ.ಮನು, ಕಾಲೋನಿ ನಿವಾಸಿಗಳಾದ ಕೆ.ಪಿ.ಪೂವಯ್ಯ, ಕೆ.ಎಸ್.ಮೋಹನ್ ಕುಮಾರ್ ಹಾಗೂ ಕೆ.ಬಿ.ನಿತಿನ್ ಉಪಸ್ಥಿತರಿದ್ದರು.

error: Content is protected !!