ಕೊಂಡಂಗೇರಿಯಲ್ಲಿ ಸಿಮೇಕ್ ಸಿಮೆಂಟ್ ಸೂಪರ್ ಸ್ಟಾಕಿಸ್ಟ್ ಮಳಿಗೆ ಉದ್ಘಾಟನೆ

19/01/2021

ಮಡಿಕೇರಿ ಜ.19 : ಸಿಮೇಕ್ ಸಿಮೆಂಟ್ ಸೂಪರ್ ಸ್ಟಾಕಿಸ್ಟ್ ಮಳಿಗೆ ವಿರಾಜಪೇಟೆ ತಾಲ್ಲೂಕಿನ ಕೊಂಡಂಗೇರಿಯ ಹೃದಯ ಭಾಗದಲ್ಲಿ ಶುಭಾರಂಭಗೊಂಡಿದೆ.
ಯಾವುದೇ ಸಿಮೆಂಟ್ ಗಳಿಗೂ ಕಡಿಮೆಯಿಲ್ಲದ ರೀತಿಯ ಉತ್ಕೃಷ್ಟ ಗುಣಮಟ್ಟವನ್ನು ಸಿಮೇಕ್ ಸಿಮೆಂಟ್ ಹೊಂದಿದೆ ಎಂದು ಸಿಎಂ ಟ್ರೇಡರ್ಸ್‍ನ ಮಾಲೀಕರುಗಳಾದ ಅಬ್ದುಲ್ ಮಜೀóóದ್ ಹಾಗೂ ಮುಹಮ್ಮದ್ ರಫೀಕ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಹಳ್ಳಿ, ಪಟ್ಟಣ, ನಗರಗಳಿಗೆ ಸಿಮೆಂಟ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಸಿಮೆಂಟ್ ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಗೌತಮ್, ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು, ಜಮಾಅತ್ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗ್ರಾ.ಪಂ ಹಾಲಿ ಹಾಗೂ ಮಾಜಿ ಸದಸ್ಯರುಗಳು, ಕೊಂಡಂಗೇರಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರುಗಳು ಹಾಗೂ ಸ್ಥಳೀಯರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.