ಬಾಣಾವರದಲ್ಲಿ ಒಂಟಿ ಸಲಗ ದಾಳಿ : ಮನೆಗಳಿಗೆ ಹಾನಿ

19/01/2021

ಮಡಿಕೇರಿ ಜ.19 : ಒಂಟಿ ಸಲಗದ ದಾಳಿಯಿಂದ ಮನೆಗಳಿಗೆ ಹಾನಿಯಾಗಿರುವ ಘಟನೆ ಶನಿವಾರಸಂತೆ ಸಮೀಪ ಬಾಣಾವರ ಸುತ್ತಮುತ್ತಲ ಗ್ರಾಮದಲ್ಲಿ ನಡೆದಿದೆ.
ಮೀಸಲು ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಒಂಟಿ ಸಲಗವೊಂದು ಬೀಡು ಬಿಟ್ಟಿದ್ದು, ಆತಂಕವನ್ನು ಸೃಷ್ಟಿಸಿದೆ. ಜನವಸತಿ ಪ್ರದೇಶಗಳಿಗೆ ದಾಳಿ ಮಾಡಿದ್ದು, ಮನೆಗಳ ಹಂಚು, ಗೋಡೆಗಳಿಗೆ ಹಾನಿಯಾಗಿದೆ. ಬಾಳೆ, ತೆಂಗು, ಹಣ್ಣಿನ ಗಿಡಗಳನ್ನು ನಾಶ ಮಾಡಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಓಡಿಸುವ ಪ್ರಯತ್ನ ಮಾಡಿದರಾದರೂ ಚೆಕ್ ಪೋಸ್ಟ್ ಬಳಿಯೇ ರಸ್ತೆಗೆ ಅಡ್ಡಲಾಗಿ ನಿಂತು ಭಯ ಮೂಡಿಸುತ್ತಿದೆ. ಅಲ್ಲದೆ ಮತ್ತೊಂದು ದಿಕ್ಕಿನಿಂದ ದಾಳಿ ಮಾಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.