ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಕುಶಾಲನಗರದಲ್ಲಿ ಎ.ಬಿ.ವಿ.ಪಿ.ಯಿಂದ ರಕ್ತದಾನ ಶಿಬಿರ

January 19, 2021

 ಮಡಿಕೇರಿ ಜ.19 :     ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರದ ಸಹಯೋಗದೊಂದಿಗೆ  ರಕ್ತ ತಪಾಸಣೆ ಮತ್ತು  ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕುಶಾಲನಗರದ   ಪ್ರಥಮ ದರ್ಜೆ ಕಾಲೇಜಿನಲ್ಲಿ  ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ  ಪ್ರೊ.|| ಲಿಂಗಮೂರ್ತಿರವರು ಸ್ವತಃ ರಕ್ತದಾನ ಮಾಡುವ ಮೂಲಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ಜೀವನದಿಂದಲೇ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯನ್ನು ತುಂಬುವುದರೊಂದಿಗೆ *ಜ್ಞಾನ -ಶೀಲ – ಏಕತೆ* ಯ ಮಂತ್ರವನ್ನು ರಕ್ತಗತ ಮಾಡುವ ಕಾಯಕವನ್ನು ಎ.ಬಿ.ವಿ.ಪಿ. ರಾಷ್ಟ್ರವ್ಯಾಪಿ ಮಾಡುತ್ತಿದೆ. ಆ ಮೂಲಕ   ಭವಿಷ್ಯತ್ ನಲ್ಲಿ ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ತಯಾರು ಮಾಡುವ ಸದುದ್ದೇಶದೊಂದಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟೀಯತೆಯನ್ನು  ತುಂಬಲಾಗುತ್ತಿದೆ.        ಇಂದಿನ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಜಿಲ್ಲಾ ಪ್ರಮುಖ್  ರಮೇಶ್ ಚಂದ್ರ   , ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರ್,        ನಗರ ಕಾರ್ಯದರ್ಶಿ ರಾಜೇಶ್ , ತನ್ಮಯ್, ಪೂಜಿತ್, ಅಭಿಷೇಕ್, ಪ್ರತೀಕ್, ಸುಭಾಷ್ ಹಾಗೂ ಹಳೇಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಪೊನ್ನಟ್ಟಿ ಸೇರಿದಂತೆ 50 ಕ್ಕೂ ಹೆಚ್ಚು  ವಿದ್ಯಾರ್ಥಿಗಳು ರಕ್ತದಾನ ಮಾಡಿದರು. 

error: Content is protected !!