ಜ.21 ರಂದು ರೈತರ ಜತೆ ಸುಪ್ರೀಂ ಕೋರ್ಟ್‌ ರಚಿಸಿರುವ ತಜ್ಞರ ಸಮಿತಿ ಸಭೆ

January 20, 2021

ಹೊಸದಿಲ್ಲಿ: ಕೃಷಿ ಕಾಯಿದೆಗಳ ಬಿಕ್ಕಟ್ಟು ನಿವಾರಣೆಗೆ ಸುಪ್ರೀಂ ಕೋರ್ಟ್‌ ರಚಿಸಿರುವ ತಜ್ಞರ ಸಮಿತಿ ಗುರುವಾರ (ಜ.21) ಪ್ರತಿಭಟನಾನಿರತ ರೈತ ಮುಖಂಡರ ಜತೆ ಮೊದಲ ಸಭೆ ನಡೆಸಲು ನಿರ್ಧರಿಸಿದೆ.

ಕೇಂದ್ರ ಸರಕಾರ ರೂಪಿಸಿರುವ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿಂದ ದಿಲ್ಲಿ ಗಡಿಯಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಬಿಕ್ಕಟ್ಟು ನಿವಾರಣೆಗೆ ತಜ್ಞರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚನೆ ಮಾಡಿದೆ.

“ಸರಕಾರ ರೂಪಿಸಿರುವ ಕಾಯಿದೆಗಳಲ್ಲಿ ಸಮಸ್ಯೆ ಇರಬಹುದು. ಅವು ಏನು ಎನ್ನುವುದನ್ನು ಸಂಬಂಧಪಟ್ಟವರ ಜತೆ ಚರ್ಚಿಸಿ ಅರಿತುಕೊಳ್ಳಲಾಗುವುದು. ವಿಶೇಷವಾಗಿ ರೈತರು ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ತಿಳಿಸಬೇಕಾದ ಅಗತ್ಯ ಇದೆ. ಸಮಿತಿಯಲ್ಲಿರುವ ನಮಗೆ ಯಾರಿಗೂ ವೈಯಕ್ತಿಕ ಅಜೆಂಡಾಗಳಿಲ್ಲ. ಕಾಯಿದೆ ಕುರಿತ ಇದುವರೆಗಿನ ಪ್ರಕಟಿತ ಅಭಿಪ್ರಾಯಗಳೇನಾದರೂ ಇದ್ದರೆ ಅವು ವೈಯಕ್ತಿಕ ನಿಲುವುಗಳು. ಈಗ ಸಮಿತಿಯ ಸದಸ್ಯರಾಗಿ ನಾವು ವೈಯಕ್ತಿಕ ಅಭಿಪ್ರಾಯವನ್ನು ಬದಿಗೊತ್ತಿ ಎಲ್ಲಾ ಕಡೆಯಿಂದ ಅಭಿಪ್ರಾಯ ಪಡೆದು ಸಮಚಿತ್ತದ ವರದಿ ಸಲ್ಲಿಸುವ ಕೆಲಸವನ್ನಷ್ಟೇ ಮಾಡುತ್ತೇವೆ,” ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾದ ಅನಿಲ್‌ ಘನವತ್‌ ತಿಳಿಸಿದ್ದಾರೆ.

error: Content is protected !!