ಸೋಮನಾಥ ದೇಗುಲ ಟ್ರಸ್ಟ್‌ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ನೇಮಕ

January 20, 2021

ಅಹಮದಾಬಾದ್‌: ವಿಶ್ವ ವಿಖ್ಯಾತ ಸೋಮನಾಥ ದೇವಸ್ಥಾನ ಆಡಳಿತದ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿರುವ ಟ್ರಸ್ಟ್‌ನ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ನೇಮಕಗೊಂಡಿದ್ದಾರೆ.

ಗಿರ್‌-ಸೋಮನಾಥ್‌ ಜಿಲ್ಲೆಯ ಪ್ರಭಾಸ್‌ ಪಟನ್‌ ಪಟ್ಟಣದಲ್ಲಿರುವ ಈ ದೇಗುಲದ ಟ್ರಸ್ಟ್‌ಗೆ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಿರುವ ಎರಡನೇ ಪ್ರಧಾನಿ ಮೋದಿ ಅವರಾಗಿದ್ದಾರೆ. ಇದುವರೆಗೆ ಟ್ರಸ್ಟಿಯಾಗಿದ್ದ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಹಿಂದೆ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೇ ಈ ಟ್ರಸ್ಟ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಮೊರಾರ್ಜಿ ದೇಸಾಯಿ ನಂತರ ಈಗ ಅಂತಹದ್ದೇ ಶ್ರೇಯಸ್ಸು ಮೋದಿ ಅವರಿಗೆ ಲಭಿಸಿದೆ. ಮೋದಿ ಅವರು ಟ್ರಸ್ಟ್‌ನ ಎಂಟನೇ ಅಧ್ಯಕ್ಷರಾಗಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ ನಿಧನದ ನಂತರ ಸೋಮನಾಥ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಪದವಿ ಖಾಲಿ ಉಳಿದಿತ್ತು. ಪಟೇಲ್‌ ನಿರಂತರ 16 ವರ್ಷ ಈ ಹುದ್ದೆ ನಿರ್ವಹಿಸಿದ್ದರು.

error: Content is protected !!