ಹೆತ್ತ ಮಗುವನ್ನು ಮಾರಾಟ ಮಾಡಿ ಜೈಲು ಪಾಲಾದ ತಾಯಿ

20/01/2021

ಚಿಕ್ಕಬಳ್ಳಾಪುರ: ಹೆತ್ತ ತಾಯಿಯೇ ತನ್ನ ಗಂಡು ಮಗುವನ್ನು ಮಾರಾಟ ಮಾಡಿ ಜೈಲು ಸೇರಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿನಡೆದಿದೆ.
ಹೊಸಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಚಂದನ ಬಂಧಿತ ಮಹಿಳೆ. ಈಕೆ ಹೊನ್ನೆನಹಳ್ಳಿ ಗ್ರಾಮದ ಪ್ರಭಾಕರ್‌ನನ್ನು ಮದುವೆಯಾಗಿದ್ದರು.

ಮದುವೆಯಾದ ಐದೇ ತಿಂಗಳಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವನ್ನು ಬೆಂಗಳೂರಿನ ಬಾಗಲೂರು ಗ್ರಾಮದ ರೂಪಾವತಿ ಮತ್ತು ಮಲ್ಲೇಶ್‌ ಎಂಬುವರಿಗೆ ದತ್ತು ನೀಡಿರುವುದಾಗಿ ಚಂದನ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಬಾಗಲೂರಿಗೆ ಭೇಟಿ ನೀಡಿದ್ದ ಜಿಲ್ಲಾ ಮಕ್ಕಳ ರಕ್ಷಣ ಘಟಕ ಮಗುವನ್ನು ರಕ್ಷಿಸಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಗುವನ್ನು ವಿಶೇಷ ದತ್ತು ಕೇಂದ್ರಕ್ಕೆ ನೀಡಲಾಗಿದ್ದು, ಚಂದನಾ ಮತ್ತು ಮಗುವನ್ನು ಪಡೆದ ರೂಪಾವತಿ ಕೂಡಾ ಜೈಲು ಸೇರಿದ್ದಾರೆ.