ತೊಕ್ಕೊಟ್ಟು ವಿನಲ್ಲಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹ ಪತ್ತೆ

January 20, 2021

ತೊಕ್ಕೊಟ್ಟು: ಉಳ್ಳಾಲ ಕೇಂದ್ರ ಬಸ್ಸು ನಿಲ್ದಾಣದಲ್ಲಿರುವ ಕೊರಗಜ್ಜ, ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಿಡಿಗೇಡಿಗಳು ಕಾಂಡೋಮ್‌ ಹಾಗೂ ಪ್ರಚೋದನಕಾರಿ ಬರಹ ಬರೆದು ಚುಣಾವಣಾ ಪ್ರಚಾರದ ಪತ್ರಗಳು ಹಾಗೂ ಬಿಜೆಪಿ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅವರ  ಭಾವಚಿತ್ರಕ್ಕೆ ಶಿಲುಬೆಯ ಹಾರ ಹಾಕಿ ವಿಕೃತಿಗೊಳಿಸಿರುವ ಭಿತ್ತಿಪತ್ರ ಪತ್ತೆಯಾಗಿದೆ.

ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದು ಹಣ ಎಣಿಸಲು ಮುಂದಾದಾಗ ಅದರೊಳಗೆ ಕಾಂಡೋಮ್‌ಗಳು ಮತ್ತು ಪ್ರಚೋದನಾಕಾರಿ ಬರಹಗಳ ಪತ್ರ ಲಭಿಸಿದೆ. ಎಂ. ರುದ್ರೇಶ್‌ ಎಂಬವರಿಗೆ ಶುಭಕೋರಿದ ಈ ಪತ್ರದಲ್ಲಿ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸೇರಿದಂತೆ ಬಿಜೆಪಿ ನಾಯಕರ ಭಾವಚಿತ್ರವಿರುವ ಭಿತ್ತಿಪತ್ರವನ್ನು ವಿಕೃತಿಗೊಳಿಸಿದ್ದಾರೆ.

error: Content is protected !!