ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ : ಜ. 30 ಕೊನೆ ದಿನ

January 20, 2021

ಮಡಿಕೇರಿ ಜ. 20 : ಜಿಲ್ಲಾ ಪತ್ರಕರ್ತರ ಸಂಘದ 2021-22 ನೇ ಸಾಲಿನ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪತ್ರಿಕಾಭವನದಿಂದ ಅರ್ಜಿಗಳನ್ನು ಪಡೆದುಕೊಂಡು ಜ. 30 ರೊಳಗೆ ತಮ್ಮ ಇತ್ತೀಚೆಗಿನ ಒಂದು ಭಾವಚಿತ್ರದೊಂದಿಗೆ ಸಲ್ಲಿಸಬೇಕಾಗಿದೆ. ನವೀಕರಣಕ್ಕೆ ರೂ 500 ಹಾಗೂ ನೂತನ ಸದಸ್ಯರಿಗೆ ರೂ 600 ಎಂದು ನಿಗದಿಪಡಿಸಲಾಗಿದ್ದು, ಜ. 30ರ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಸದಸ್ಯತ್ವಕ್ಕೆ ಮಾನದಂಡಗಳು :

  1. ರಾಜಕೀಯದಲ್ಲಿರುವವರಿಗೆ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿರುವವರಿಗೆ ಪತ್ರಕರ್ತರ ಸಂಘದ ಸದಸ್ಯತ್ವ ನೀಡಲಾಗುವುದಿಲ್ಲ.ಇದು ನವೀಕರಣಕ್ಕೆ ಅನ್ವಯಿಸುವುದಿಲ್ಲ.
    2.ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಜಿಲ್ಲಾ ವರದಿಗಾರರು/ಸಂಪಾದಕರು ಗಳಿಂದ ದೃಢೀಕರಿಸಿದ ಪತ್ರ ಲಗತ್ತಿಸಬೇಕು.
  2. ಮಾಧ್ಯಮಕ್ಷೇತ್ರದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ. ನೂತನವಾಗಿ ಸದಸ್ಯತ್ವ ಪಡೆಯುವವರು ಮಾಧ್ಯಮ ಕ್ಷೇತ್ರದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು ಹಾಗೂ 21 ವರ್ಷ ಮೇಲ್ಪಟ್ಟಿರಬೇಕು.ಜೊತೆಗೆ ಕ್ಯಾಮೆರಾಮೆನ್ ಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣವಾದ ಅಂಕಪಟ್ಟಿ ಹಾಗೂ ವರದಿಗಾರರು ಪಿಯುಸಿ ಉತ್ತೀರ್ಣವಾದ ಅಂಕಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.ದಾಖಲೆಗಳು ಅಪೂರ್ಣವಾಗಿದ್ದರೆ ಮಾನ್ಯಮಾಡಲಾಗುವುದಿಲ್ಲ.
  3. ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ.ಅಪೂರ್ಣ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.
    4.ಎಲ್ಲಾ ಪತ್ರಿಕೆಗಳಿಗೆ ಆರ್.ಎನ್.ಐ ನೋಂದಣಿ ಕಡ್ಡಾಯ.ವಾರಪತ್ರಿಕೆ ವರ್ಷದ 48 ವಾರಗಳಲ್ಲಿ 43 ಸಂಚಿಕೆಗಳು ಪ್ರಕಟವಾಗಿರಲೇಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ-9482982228.

error: Content is protected !!