ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ನಿಂದ ಕಸ ಸಂಗ್ರಹದ ಆಟೋ ಟಿಪ್ಪರ್‌ಗೆ ಚಾಲನೆ

January 20, 2021

ಸಿದ್ದಾಪುರ ಜ.20 : ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ವತಿಯಿಂದ ಮನೆ ಮನೆ ಕಸ ಸಂಗ್ರಹದ ಆಟೋ ಟಿಪ್ಪರ್‍ಗೆ ಚಾಲನೆ ನೀಡಲಾಯಿತು.
ಸ್ವಚ್ಛ ಭಾರತ್ ಅಭಿಯಾನದಡಿ ಖರೀದಿಸಲಾದ ನೂತನ ಆಟೋ ಟಿಪ್ಪರ್‍ನ ಕೀ ಯನ್ನು ಗ್ರಾ.ಪಂ ನೂತನ ಸದಸ್ಯ ಮನುಮಹೇಶ್ ಅವರು ಸ್ವಚ್ಛತಾ ಸಿಬ್ಬಂದಿ ಜುನೈದ್ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮದಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಚುನಾವಣೆ ಸಂದರ್ಭ ಪಕ್ಷ ಆಧಾರಿತವಾಗಿ ಸ್ಪರ್ಧೆ ನಡೆಯುತ್ತದೆ. ಆದರೆ ಈಗ ಚುನಾವಣೆ ಮುಗಿದಿದ್ದು, ಜಯ ಸಾಧಿಸಿದವರೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಸ್ಪರ ಗೌರವದಿಂದ ಅಭಿವೃದ್ಧಿಪರ ಚಿಂತನೆ ಹೊಂದಬೇಕು ಎಂದರು.
ಪಂಚಾಯಿತಿ ಕಾರ್ಯದರ್ಶಿ ರವಿ ಹಾಗೂ ನೂತನ ಸದಸ್ಯರುಗಳು ಹಾಜರಿದ್ದರು.

error: Content is protected !!