ದೆಹಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಫ್ಲೇಯಿಂಗ್ ಆಫೀಸರ್ ಕರ್ನಂಡ ಮನೋಜ್ ಕುಟ್ಟಪ್ಪ

January 20, 2021

ಮಡಿಕೇರಿ ಜ. 20 : ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ನಡೆಯುವ ಆಕರ್ಷಕ ಮೆರವಣಿಗೆಯಲ್ಲಿ ಭಾರತೀಯ ವಾಯುಸೇನೆಯ ತಂಡವನ್ನು ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯವರಾದ ಪ್ರಸ್ತುತ ವಾಯು ಸೇನೆಯಲ್ಲಿ ಫ್ಲೇಯಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಕರ್ನಂಡ ಮನೋಜ್ ಕುಟ್ಟಪ್ಪ ಭಾಗವಹಿಸಲಿದ್ದಾರೆ.

ಮೆರವಣಿಗೆಯಲ್ಲಿ ವಾಯುಸೇನೆಯ ತಂಡದ ಮೊದಲ ಸಾಲಿನ ಮೂವರು ಅಧಿಕಾರಿಗಳ ಪೈಕಿ ಎಡಗಡೆಯವರಾಗಿ ಭಾಗವಹಿಸಲು ಸ್ಥಾನ ಪಡೆದು ಕೊಂಡಿರುವ ಕರ್ನಂಡ ಮನೋಜ್ ಕುಟ್ಟಪ್ಪ ಮಡಿಕೇರಿಯ ಜವಾಹರ್ ನವೋದಯದ ವಿಧ್ಯಾರ್ಥಿಯಾಗಿದ್ದು, ಬೆಂಗಳೂರಿನ ರೇವಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಪದವಿದರರಾಗಿ ಕಳೆದ ಒಂದು ವರ್ಷದ ಹಿಂದೆ ವಾಯುಸೇನೆಗೆ ಸೇರ್ಪಡೆಯಾದ ಇವರು ಅತೀ ಸಣ್ಣ ಅವಧಿಯಲ್ಲಿ ಗಮನ ಸೆಳೆದಿದ್ದಾರೆ. ಇವರು ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿಯ ಕರ್ನಂಡ ಮಣಿ ಕುಶಾಲಪ್ಪ ಹಾಗೂ ತುಳಸಿ (ತಾಮನೆ: ಕೋಳೇರ) ಪುತ್ರ.

ಮಾಹಿತಿ: #ಕೊಡಗು_ವಾರ್ತೆ
ವಿಶಿಷ್ಟ ಕೊಡಗಿನ ವಿಭಿನ್ನ ಕನ್ನಡ ವಾರಪತ್ರಿಕೆ, ಇದುಸತ್ಯಕ್ಕೆಹಿಡಿದ_ಕನ್ನಡಿ…9880967573

error: Content is protected !!