ಫೆ. 12 ರಿಂದ ವಿರಾಜಪೇಟೆಯಲ್ಲಿ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾವಳಿ

January 20, 2021

ವಿರಾಜಪೇಟೆ:ಜ:19: ನಗರದ ಕೂರ್ಗ್ ಕಾವೇರಿ ಬ್ರಿಗೇಡಿಯರ್ಸ್ ಸಂಸ್ಥೆಯ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಫೆ. 12 ರಿಂದ 14ರ ವರೆಗೆ ವಿರಾಜಪೇಟೆಯಲ್ಲಿ ಪುರುಷರ ಟೈಗರ್ ಫೈ ರಾಷ್ಟ್ರಮಟ್ಟದ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎನ್.ಎ ಅಭಿನವ್ ಮಾಹಿತಿ ನೀಡಿದ್ದಾರೆ.

ನಗರದ ತಾಲ್ಲೂಕು ಮೈದಾನದಲ್ಲಿ ಫೆ. 12,13,14 ರಂದು ಮೂರು ದಿನಗಳ ಕಾಲ ನಡೆಯಲಿದೆ. ಸಂಸ್ಥೆಯು ಕ್ರೀಡೆ,ಸಂಸ್ಕøತಿ, ಮತ್ತುಕಲೆಗೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾಲ್ಚೆಂಡು ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತಿದ್ದು,ಉಳಿತಾಯದ ಮೊತ್ತದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದರು.
ಗ್ರಾಮೀಣ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಅಭಿನವ್ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ವಿ.ಜಿ ಸುಮನ್ ಮಾತನಾಡಿ ತಂಡಗಳ ನೋಂದಾವಣೆಗೆ ಜ. 30 ಕೊನೆಯ ದಿನವಾಗಿದ್ದು, ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ಸಂಸ್ಥೆಯ ವತಿಯಿಂದ ವೈಯಕ್ತಿಕ ಪರಿತೋಷಕಗಳನ್ನು ನೀಡಲಾಗುವುದೆಂದರು.
ಹೆಚ್ಚಿನ ಮಾಹಿತಿಗಾಗಿ 9110889683, 7090328838 ಸಂಪರ್ಕಿಸಬಹುದಾಗಿದೆ.

error: Content is protected !!