ಸೌತೆಕಾಯಿಯ ಸ್ಯಾಂಡ್ ವಿಚ್ ಮಾಡುವ ವಿಧಾನ

January 20, 2021

ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಇದರ ವೈಜ್ಞಾನಿಕ ಹೆಸರುಸೌತೆಕಾಯಿಯು ಒಂದು ಬಳ್ಳಿಯ ಗಿಡವಾಗಿದೆ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ.

ಸೌತೆಕಾಯಿಯಲ್ಲಿ 96% ರಷ್ಟು ಭಾಗ ನೀರಿರುತ್ತದೆ. ಇನ್ನುಳಿದ 4% ರಷ್ಟು ಭಾಗ ಪೋಷಕಾಂಶಗಳಿರುತ್ತವೆ. ಸೌತೆಕಾಯಿಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಹಾಗು ಕಾರ್ಬೋ ಹೈಡ್ರೇಟ್, ಪ್ರೊಟೀನ್, ನಾರಿನಂಶ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಶಿಯಂ ಮ್ಯಾಂಗನೀಸ್, ಪೋಷಕಾಂಶಗಳನ್ನು ಹೊಂದಿದೆ. ಆರೋಗ್ಯಕ್ಕೆ ಸೌತೆಕಾಯಿಯು ಪರಿಪೂರ್ಣವಾದ ತರಕಾರಿಯಾಗಿದೆ. 

ಬೇಕಾಗುವ ಸಾಮಾಗ್ರಿಗಳು : ಬ್ರೆಡ್ ತುಂಡು 4-6, ಸೌತೆಕಾಯಿ 1, ಸ್ವಲ್ಪ ಚೀಸ್, ಬೆಣ್ಣೆ 2 ಚಮಚ, ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು, ಚಾಟ್ ಮಸಾಲ ಚಿಟಿಕೆಯಷ್ಟು, ರುಚಿಗೆ ತಕ್ಕ ಉಪ್ಪು,
ತಯಾರಿಸುವ ವಿಧಾನ: ಸೌತೆಕಾಯಿಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.ಬ್ರೆಡ್ ನ ತುದಿಯನ್ನು ಕತ್ತರಿಸಿ , ನಂತರ ಬ್ರೆಡ್ ಗೆ ಬೆಣ್ಣೆ ಸವರಬೇಕು.ನಂತರ ಚೀಸ್ ಹಾಕಿ ಸೌತೆ ಕಾಯಿ ಹಾಕಿ, ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲ ಪುಡಿ ಮತ್ತೊಂದು ಬ್ರೆಡ್ ನಿಂದ ಕವರ್ ಮಾಡಿ.ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಬೆಣ್ಣೆ ಸವರಿ ಅದರಲ್ಲಿ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್ ವಿಚ್ ರೆಡಿ.

error: Content is protected !!