ಜ.24 ರಂದು “ರಕ್ತದಾನದ ಮಹತ್ವ ಕೇಳಿ ತಿಳಿಯಿರಿ” ಕಾರ್ಯಕ್ರಮ

January 20, 2021

ಮಡಿಕೇರಿ ಜ.20 : ಮಾನವೀಯ ಸ್ನೇಹಿತರ ಒಕ್ಕೂಟ ವಾಟ್ಸಾಪ್ ಗ್ರೂಪ್ ಜ.24 ರಂದು ಸಾರ್ವಜನಿಕರಿಗೆ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ “ರಕ್ತದಾನದ ಮಹತ್ವ ಕೇಳಿ ತಿಳಿಯಿರಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸಾರ್ವಜನಿಕರು ರಕ್ತದಾನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳನ್ನು ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದ್ದು, ಮಡಿಕೇರಿಯ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ರಕ್ತನಿಧಿ ಅಧಿಕಾರಿ ಡಾ.ಕೆ.ಪಿ.ಕರುಂಬಯ್ಯ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಆಸಕ್ತರು ವಾಟ್ಸಾಪ್ ಸಂಖ್ಯೆ 9964076698, 9481213920 ಗೆ ಜ.22ರ ಸಂಜೆಯೊಳಗೆ ತಮ್ಮ ಪ್ರಶ್ನೆಗಳನ್ನು ಕಳುಹಿಸಬಹುದಾಗಿದೆ ಎಂದು ಮಾನವೀಯ ಸ್ನೇಹಿತರ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!