2ನೇ ಮೊಣ್ಣಂಗೇರಿಯಲ್ಲಿ ಗಮನ ಸೆಳೆದ ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನ

January 20, 2021

ಮಡಿಕೇರಿ ಜ.20 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕು 2ನೇ ಮೊಣ್ಣಂಗೇರಿ ಗ್ರಾಮದ ಎ.ಬಿ.ಮಾಧವ ಅವರ ಮನೆಯಲ್ಲಿ ವಿಶೇಷ ಘಟಕ ಯೋಜನೆಯಡಿ ಮಾಧವ ಅವರ ನಿರ್ದೇಶನದಲ್ಲಿ ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಎಚ್.ಬಿ.ಕಾರ್ಯಪ್ಪ ಅವರು ಉದ್ಘಾಟಿಸಿ ಶುಭಕೋರಿದರು. ಕೆ.ಮಹಾಭಲೇಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಎ.ಕೆ.ಗಣಪತಿ ಅವರು ಸ್ವಾಗತಿಸಿ, ನಿರೂಪಿಸಿದರು. ಎ.ಬಿ.ಮನೋಹರ್ ಅವರು ವಂದಿಸಿದರು. ಮಾಧವ ಅವರು ಶಕಟಾಸುರನಾಗಿ ಅದ್ಭುತವಾಗಿ ಪಾತ್ರ ನಿರ್ವಹಿಸಿದರು.
ಕಂಸವಧೆ ಯಕ್ಷಗಾನ ಪ್ರದರ್ಶನ :-ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಡಿಕೇರಿ ತಾಲ್ಲೂಕು ಚೆಂಬು ಗ್ರಾಮದ ಆನ್ಯಾಳ ಸಮುದಾಯ ಭವನದಲ್ಲಿ ವಿಶೇಷ ಘಟಕ ಯೋಜನೆಯಡಿ ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಶ್ರೀ ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ಕಲಾತಂಡ ಇವರಿಂದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ದೇವಕಿ ಅವರು ಉದ್ಘಾಟಿಸಿದರು. ಅಜಿಲ ಯಾನೆ ನಲಿಕೆ ಸೇವಾ ಸಮಿತಿ ಉಪಾಧ್ಯಕ್ಷರಾದ ಬಿ.ಚಂದಪ್ಪ ಅವರು ವಹಿಸಿದ್ದರು. ಬಿ.ಕೃಷ್ಣಪ್ಪ ಅವರು ಸ್ವಾಗತಿಸಿ, ನಿರೂಪಿಸಿದರು. ಎ.ಕೆ.ಶೃತಿ ಅವರು ವಂದಿಸಿದರು.

error: Content is protected !!