ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಿರಿಯ ಸಹಕಾರಿ ಬೊಳ್ಳವ್ವ ಮಾಚಯ್ಯರಿಗೆ ಸನ್ಮಾನ

January 20, 2021

ಮಡಿಕೇರಿ ಜ. 20 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1970ರಲ್ಲಿ ಪ್ರಪ್ರಥಮ ಸ್ಥಾಪಕಾಧ್ಯಕ್ಷರಾದ ದಿ. ಕೊಂಗೇಟಿರ ಪಿ. ಮಾಚಯ್ಯನವರ ಪತ್ನಿ ಹಾಗೂ ಹಿರಿಯ ಸಹಕಾರಿ ಕೊಂಗೇಟಿರ ಬೊಳ್ಳವ್ವ ಮಾಚಯ್ಯ ನವರಿಗೆ ಸಹಕಾರ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸಂಘದ ಪುಣ್ಯ ಕೋಟಿ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿ ಗೃಹದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಹಕಾರಿ ಗಳಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ತೀವ್ರ ಅನಾರೋಗ್ಯದ ನಿಮಿತ್ತ ಕೊಂಗೇಟಿರ ಬೊಳ್ಳವ್ವ ಮಾಚಯ್ಯ ರಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಮನೆಗೆ ತೆರಳಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳು ಹಾಜರಿದ್ದರು.

error: Content is protected !!