ಶೀಘ್ರವೇ ರಾಜ್ಯದಲ್ಲಿ ಸಾವಯವ ಕೃಷಿಕರ ಸಮಾವೇಶ: ನಳಿನ್‌ ಕುಮಾರ್‌ ಕಟೀಲ್‌

January 21, 2021

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷ ಸಾವಯವ ಕೃಷಿಕರನ್ನು ಸಂಘಟಿಸಿ ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಬೆಂಗಳೂರು ಉತ್ತರ ಒಡೆಯರಹಳ್ಳಿ ತೋಟದಲ್ಲಿ ನಡೆದ ರಾಜ್ಯ ರೈತಮೋರ್ಚಾದ ರಾಜ್ಯ ಪದಾಧಿಕಾರಿಗಳ ಸಭೆಯ ಸಮಾರೋಪದಲ್ಲಿ ಮಾತನಾಡಿ, ”ಜನರಿಗೆ ಸತ್ವಯುತ ಆಹಾರ ಪೂರೈಕೆಯಾಗಬೇಕು ಎಂಬುದು ಬಿಜೆಪಿಯ ಆಶಯವಾಗಿದೆ. ಇದಕ್ಕಾಗಿಯೇ ಈ ಹಿಂದೆ ಸಾವಯವ ಕೃಷಿಗೆ ಯಡಿಯೂರಪ್ಪ ಸರಕಾರ ಪ್ರೋತ್ಸಾಹಿಸಿತ್ತು. ಇದರ ಪರಿಣಾಮ ಸಾವಯುವ ಕೃಷಿಕರ ಸಂಖ್ಯೆ ಹೆಚ್ಚಾಗಿದೆ,”ಎಂದರು.

‘ರೈತ ಮೋರ್ಚಾವು ಬೂತ್‌ ಮಟ್ಟದಲ್ಲಿ ಸಾವಯುವ ಕೃಷಿ ಸಮಿತಿಗಳನ್ನು ಮಾಡಿ, ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಗ್ರಾಮ ಮಟ್ಟದಲ್ಲೇ ಕಾರ‍್ಯಕ್ರಮಗಳನ್ನು ರೂಪಿಸಬೇಕು,” ಎಂದರು.

ಬೆಳೆಗಳಲ್ಲಿ ವೈವಿಧ್ಯತೆ ರೂಪಿಸಲು, ರೈತರಿಗೆ ಮಾರುಕಟ್ಟೆಗಳನ್ನು ವೃದ್ಧಿಗೊಳಿಸುವುದಕ್ಕೆ ಸಹಾಯ ಮಾಡಬೇಕಿದೆ. ಪ್ರಗತಿ ಸಾಧಿಸಿದ ರೈತರ ತೋಟಗಳಿಗೆ ಭೇಟಿ ನೀಡುವ ಕೆಲಸ ಆಗಬೇಕಿದೆ,”ಎಂದರು.

error: Content is protected !!