ರುಚಿ ರುಚಿಯಾದ ಚಿಲ್ಲಿ ಪೋರ್ಕ್ ಮಾಡೋದು ಹೇಗೆ ಗೊತ್ತಾ ? ಇಲ್ಲಿದೆ ಮಾಹಿತಿ ..

January 21, 2021

ಚಿಲ್ಲಿ ಪೋರ್ಕ್ ಇದು ಕೊಡವರ ಮದುವೆಗಳಲ್ಲಿ ಮತ್ತು ಮನೆಯಲ್ಲಿ ಮಾಡುವಂತ ಒಂದು ಮಾಂಸ ಖಾದ್ಯ.

ಬೇಕಾಗುವ ಸಾಮಾಗ್ರಿಗಳು : 1 ಕೆ ಜಿ ಹಂದಿ ಮಾಂಸ, 1 ಟೀ ಚಮಚ ಅರಿಸಿನ ಪುಡಿ, 1/4 ಕೆ ಜಿ ಹಸಿ ಮಣಸಿನ
ಕಾಯಿ, 30 ಬೆಳ್ಳುಳ್ಳಿಯ ಎಸಳು, ಎರಡು ಇಂಚಿನಷ್ಟು ಶುಂಠಿ, 1/4 ಕೆಜಿ ಈರುಳ್ಳಿ, 1/2 ಕೆಜಿ ದೊಡ್ದ ಮೆಣಸಿನಕಾಯಿ
( capsicum), ಉಪ್ಪು, ಕಾಚಂ ಪುಳಿ, ಕೊತ್ತಂಬರಿ ಸೊಪ್ಪು,ಕರಿಬೇವು , ಪುದೀನ, ಎಣ್ಣೆ

ಮಾಡುವ ವಿಧಾನ : ಮೊದಲು ಮಾಂಸವನ್ನು ಚೆನ್ನಾಗಿ ತೊಳೆದು, ಪುನಃ ಅದಕ್ಕೆ ಅರಶಿನ,ಉಪ್ಪು ಹಾಕಿ ನೀರಿನಿಂದ ತೊಳೆದುಕೊಳ್ಳಿ. ಮಾಂಸದ ತುಂಡುಗಳು ದೊಡ್ಡದಾಗಿಯೇ ಇರಬೇಕು. ಈಗ ಒಂದು ಪಾತ್ರೆಯಲ್ಲಿ ನೀರು ಇಟ್ಟು ಅದಕ್ಕೆ ಮಾಂಸವನ್ನು ಹಾಕಿ ,ಅರಿಶಿನ, ಉಪ್ಪು ಹಾಕಿ,ಮುಚ್ಚಳ ಮುಚ್ಚಬೇಕು. ಅದು ಬೇಯುವ ಸಮಯದಲ್ಲಿ, ನಾವು ಹಸಿಮೆಣಸಿನಕಾಯಿಯನ್ನು ತೊಳೆದು (ಉದ್ದವಾಗಿ
ಹೆಚ್ಚಿಕೊಳ್ಳಬೇಕು
) ,ಹಾಗೆಯೇ ದೊಡ್ಡ ಮೆಣಸಿನಕಾಯಿನ್ನು ಹೆಚ್ಚಿಕೊಳ್ಳಿ. ಶುಂಠಿ ಬೆಳ್ಳುಳ್ಳಿಯನ್ನ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಈಗ ಬೆಂದ ಮಾಂಸವನ್ನು ಒಂದು ತಟ್ಟೆಯಲ್ಲಿ ಹಾಕಿ, ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಒಂದು ಪಾತ್ರೆಯಲ್ಲಿ 3 ದೊಡ್ಡ ಚಮಚ ಎಣ್ಣೆ,
ಎಣ್ಣೆ ಕಾದ ಮೇಲೆ ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಹಾಕಿ ಬಾಡಿಸಿ, ನಂತರ ಅದಕ್ಕೆ, ಸಣ್ಣಗೆ ಹೆಚ್ಚಿದ ಶುಂಠಿ ಬೆಳ್ಳುಳ್ಳಿ, ದೊಡ್ಡ ಮೆಣಸಿನಕಾಯಿ ಹಾಕಿ ಚೆನ್ನಾಗಿ ಬೇಯಿಸಿ, ಅನಂತರ ಸಣ್ಣ ಪ್ರಮಾಣದಲ್ಲಿ ಹೆಚ್ಚಿದ ಮಾಂಸವನ್ನು ಹಾಕಿ ಚೆನ್ನಾಗಿ ಕೈ ಅಡಿಸಿ, ಸಲ್ಪ ನೀರು ಸೇರಿಸಿ, ಈಗ ಇದಕ್ಕೆ ಬೇಕಾದರೆ ಸಲ್ಪ ,ಉಪ್ಪು, ಕರಿ ಮೆಣಸಿನ ಪುಡಿ ಸೇರಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು,ಕರಿಬೇವು ,ಪುದೀನ ಸೇರಿಸಿ, 3 ಟೇಬಲ್ ಚಮಚ ಕಾಂಚಂಪುಳಿ ಸೇರಿಸಿ ಚೆನ್ನಾಗಿ ಕೈಯಾಡಿಸಿ, (ಇದಕ್ಕೆ ನಿಂಬೆಹಣ್ಣಿನ ರಸ ಹಾಕಿದರು ಚೆನ್ನಾಗಿರುತ್ತದೆ ) ಈಗ ತಟ್ಟೆಗೆ ಹಾಕಿ ಸವಿಯಿರಿ.

….. Kollimada Raki
ಕೊಳ್ಳಿಮಾಡ ರಾಕಿ

ಕೊಳ್ಳಿಮಾಡ ರಾಕಿ

error: Content is protected !!