ಜ.31ರಂದು ಕೆ.ನಿಡುಗಣೆ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

ಮಡಿಕೇರಿ ಜ. 21 : ವಿಸ್ಮಯ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ವತಿಯಿಂದ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಗೊಳಪಡುವ ಆಟಗಾರರಿಗೆ ಜ.31ರಂದು ಕೆ.ನಿಡುಗಣೆ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ನಂದಿಮೊಟ್ಟೆಯ ಬ್ಲಾಸಂ ಹೊಟೇಲ್ ಸಭಾಂಗಣದಲ್ಲಿ ಈಗಾಗಲೇ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದ್ದು, ಒಟ್ಟು 5 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ, ಮಿಸ್ಟಿ ಲೀಡ್ಸ್, ಕರವಲೆ ಭಗವತಿ ಬಾಯ್ಸ್, ಎಕ್ಸ್ ಲಯನ್ಸ್ ಸ್ಟ್ರೈಕರ್ಸ್, ಸ್ಪೂರ್ತಿ ಕ್ರಿಕೇಟರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಹಾಗೂ ಯುವಕರನ್ನು ಒಗ್ಗೂಡಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಜೊತೆಗೆ ಮ್ಯಾನ್ ಆಪ್ ದಿ ಮ್ಯಾಚ್, ಮ್ಯಾನ್ ಆಪ್ ದಿ ಸೀರಿಸ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮ್ಯಾನ್, ಬೆಸ್ಟ್ ಪೀಲ್ಡರ್, ಬೆಸ್ಟ್ ಕ್ಯಾಚ್, ಅಪ್ಕಮಿಂಗ್ ಪ್ಲೇಯರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪಂದ್ಯಾವಳಿ ದಿನದಂದು ಕೆ.ನಿಡುಗಣೆ ಗ್ರಾ.ಪಂ. ನೂತನ ಸದಸ್ಯರು ಹಾಗೂ 10ನೇ ತರಗತಿಯಲ್ಲಿ ಅತೀಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಎಂದು ಆಯೋಜಕರಾದ ರಮೇಶ್, ದರ್ಶಿತ್, ಸುಜಿತ್, ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
