ಈ ಕಷಾಯ ಕುಡಿದರೆ ಶೀತ, ಕೆಮ್ಮು ಮಾಯ !

21/01/2021

ಶೀತ ಕೆಮ್ಮು ನಿವಾರಣೆಗೆ ಇರೋ ಕಷಾಯ:

ಎರಡು ಕಪ್ ನೀರು, ಒಂದು ಟೇಬಲ್ ಸ್ಪೂನ್ ಜೀರಿಗೆ, ಕಪ್ಪು ಅಥವಾ ಬಿಳಿ ತುಳಸಿ ಎಲೆ 10/15 (ಕಪ್ಪು ತುಳಸಿ ಒಳ್ಳೆಯದು), ಹಸಿ ಶುಂಠಿ ಒಂದು ಚೂರು, ಒಳ್ಳೆ ಮೆಣಸು 2, ಒಂದು ಚೂರು ಬೆಲ್ಲ ಇದಿಷ್ಟನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಅರ್ಧ ಕಪ್ ಆಗುವವರೆಗೆ ಕುದಿಸಿ ನಂತರ ಸೋಸಿ ರಾತ್ರಿ ಮಲಗುವ ಮೊದಲು ಬಿಸಿ ಬಿಸಿ ಕುಡಿಯಬೇಕು. ಶೀತ, ಕೆಮ್ಮು ಇರುವವರಿಗೆ ಈ ಕಷಾಯ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಬರಹ : ಗ್ರೇಸಿ ಸುಗಂಧ