ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲಿಕರ ಸಂಘದಿಂದ ಗಾಯಾಳುವಿಗೆ ನೆರವು

21/01/2021

ಸುಂಟಿಕೊಪ್ಪ ಜ.21 : ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಇತೀಚೆಗೆ ನಡೆದ ಅಪಘಾತದಲ್ಲಿ ಗಾಯ ಗೊಂಡಿದ್ದ ಆಟೋ ಚಾಲಕ ಶಾಂತಗೇರಿಯ ಬಾಲಕುಮಾರ ಎಂಬಾತನಿಗೆ ಸಂಘದ ವತಿಯಿಂದ 3000 ರೂಪಾಯಿ ಸಹಾಯ ಧನವನ್ನು ನೀಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ (ದಿನು)ಗೌರವ ಅಧ್ಯಕ್ಷರಾದ ಚಂದ್ರ, ವಿಶ್ವನಾಥ, ಉಪಾಧ್ಯಕ್ಷರಾದ ನವೀದ್, ಸುನೀಲ್, ಕಾರ್ಯದರ್ಶಿ ಪ್ರಶಂತ್(ಕೋಕ), ಫೆಲಿಕ್ಸ್, ಖಜಾಂಚಿ ದನಂಜಯ ಇದ್ದರು.