ಮದುವೆಗೆ ಹೋದ ಕಾರು ಚಾಲಕನ ಮೇಲೆ ಹಲ್ಲೆ : ಕಾನ್ ಬೈಲು ಗ್ರಾಮದಲ್ಲಿ ಪ್ರಕರಣ

January 21, 2021

ಸುಂಟಿಕೊಪ್ಪ ಜ.21 : ಮದುವೆಗೆ ತೆರಳಿದ ಕಾರು ಚಾಲಕರೊಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಪ್ರಕರಣ ಸಮೀಪದ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್ ಬೈಲು ಗ್ರಾಮದ ಪೂವಯ್ಯ ಕಾಲೋನಿಯಲ್ಲಿ ನಡೆದಿದೆ.
ಸುಂಟಿಕೊಪ್ಪದ ಕಾರು ಚಾಲಕ ಬಿ.ಎಂ.ಸುನೀಲ್ ಎಂಬಾತ ಬುದುವಾರ ರಾತ್ರಿ 8.30ರ ಸಂದರ್ಭದಲ್ಲಿ ಪ್ರಯಾಣಿಕರನ್ನು ಕರೆದು ಕೊಂಡು ಪೂವಯ್ಯ ಕಾಲೋನಿಗೆ ತೆರಳಿದ್ದಾರೆ.
ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿದ ಸಂದರ್ಭ ನಾಲ್ಕೈದು ಮಂದಿ ಕಾರಿನ ಬಾನೆಟ್ ಮೇಲೆ ಏರಿಕುಳಿತಾಗ ಪ್ರಶ್ನೆ ಮಾಡಿದ ಸಂದರ್ಭÀ ಸುನೀಲ್ ಮೇಲೆ ಎಕಾಏಕಿ ಕಲ್ಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ತೀವ್ರವಾಗಿ ಗಾಯಗೊಂಡ ಸುನೀಲ್ ಅವರನ್ನು ಸ್ಥಳೀಯರು ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆ ನಡೆಸಿದ ಸಂದರ್ಭ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿದ್ದ ವಾಚ್ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಹಲ್ಲೆ ನಡೆಸಿದ ಮೊಳೂರು ಗ್ರಾಮದ ಸಚಿನ್, ಮನೋಜ್, ಯತೀಶ್, ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು ಉಳಿದವರಿಗೆ ಬಲೆ ಬೀಸಿದ್ದಾರೆ.

error: Content is protected !!