ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿದಾಳಿಗೆ ಹಸು ಬಲಿ

January 22, 2021

ಮಡಿಕೇರಿ ಜ. 22 : ಹುಲಿದಾಳಿಗೆ ಹಸುವೊಂದು ಬಲಿಯಾದ ಘಟನೆ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಚೆಟ್ಟಂಗಡ ನವೀನ್ ಎಂಬವರ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ರೈತ ಸಂಘ ಹಾಗೂ ಹಸಿರು ಸೇನೆಯ ಶ್ರೀಮಂಗಲ ಹೋಬಳಿ ರೈತ ಮುಖಂಡ ಚೆಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಚೆಟ್ಟಂಗಡ ಸಜನ್ ಸೋಮಣ್ಣ ಭೇಟಿ ನೀಡಿ ಹುಲಿಯನ್ನು ಕೂಡಲೇ ಸೂಕ್ತ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಹೆಚ್ಚಿನ ಮೊತ್ತದ ಪರಿಹಾರದ ಭರವಸೆ ನೀಡಿದರು.

error: Content is protected !!