ತರಬೇತಿ ಕಾರ್ಯಾಗಾರ : ಮಕ್ಕಳನ್ನು ಹೃದಯ ವೈಶಾಲ್ಯದಿಂದ ನೋಡಿಕೊಳ್ಳಿ : ಪರಶುರಾಮ್ ಸಲಹೆ

January 22, 2021

ಮಡಿಕೇರಿ ಜ.21 : ಮಕ್ಕಳನ್ನು ಹೃದಯ ವೈಶಾಲ್ಯದಿಂದ ನೋಡಿಕೊಳ್ಳಬೇಕು, ಇದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ವೃದ್ಧ್ದಿಯಾಗುತ್ತದೆ. ಮಾನವೀಯ ಗುಣಗಳಿಂದ ಮಕ್ಕಳ ಪೆÇೀಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಪರಶುರಾಮ್ ಅವರು ಹೇಳಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಭಾಗಿತ್ವದಲ್ಲಿ ಗುರುವಾರ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಕ್ಕಳ ಪಾಲನ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿಯ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನನ್ನು ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ರಕ್ಷಣೆ ಮಾಡಬೇಕು ಎಂದು ಅವರು ತಿಳಿಸಿದರು.
ಮಕ್ಕಳು ನಮ್ಮ ಸಂಪತ್ತು, ಮಕ್ಕಳನ್ನು ಕಾಪಾಡುವ ಜವಾಬ್ದಾರಿಯು ಮಕ್ಕಳ ಪಾಲನ ಸಂಸ್ಥೆಯ ಮುಖ್ಯ ಕಾರ್ಯವಾಗಿದೆ. ಸಂಸ್ಥೆಯಲ್ಲಿ ಮಗುವಿನ ಸಂಪೂರ್ಣ ಮಾಹಿತಿಯು ಇರಬೇಕು. ಮತ್ತು ಜೆಜೆ ಆಕ್ಟ್, ಪೆÇಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಅವರು ಮಾತನಾಡಿ ತಾಯಿಯ ಮಮತೆ, ತಂದೆಯ ಜವಾಬ್ದಾರಿ ಒಂದು ಕುಟುಂಬಕ್ಕೆ ಅಗತ್ಯ ಅದೇ ರೀತಿ ಮಕ್ಕಳ ಪೆÇೀಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು, ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡರೆ ಅವರ ಮುಂದಿನ ಭವಿಷ್ಯವು ವೃದ್ಧಿಯಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಟ್ಟಡಗಳು ವಿಜೃಂಭಿಸುತ್ತಿವೆ, ಮಕ್ಕಳು ಸೋರಗುತ್ತಿವೆ. ಇಂತಹ ಸಂಗತಿಗಳು ಹೆಚ್ಚಾಗಿದ್ದು, ಮಕ್ಕಳನ್ನು ಸಮಾನ ಮನೋಭಾವದಿಂದ ಕಾಣುವಂತಾಬೇಕು ಎಂದು ಅವರು ಸಲಹೆ ಮಾಡಿದರು.
ಸಂಸ್ಥೆಗಳಿಗೆ ಹಲವು ರೀತಿಯ ಸಮಸ್ಯೆಗಳು ಬರುವುದು ಸಹಜ, ಅದನ್ನು ಮೆಟ್ಟಿ ನಿಲ್ಲಬೇಕು, ಮಕ್ಕಳ ಪೆÇೀಷಣ ಸಂಸ್ಥೆಗಳು ಮಗುವಿಗೆ ಉನ್ನತ ಸ್ಥಾನವನ್ನು ಕೊಟ್ಟಾಗ ಮಾತ್ರ ಮಗುವಿನ ಬೆಳವಣಿಗೆ ಉತ್ತಮ ರೀತಿಯಲ್ಲಿ ಆಗುತ್ತದೆ. ಕಾನೂನಿನ ಬಗ್ಗೆ ತಿಳಿದುಕೊಂಡು ಸಂಸ್ಥೆಯನ್ನು ನಡೆಸಿ ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗುವ ಸಂಭವ ಬರುತ್ತದೆ ಎಂದು ಸ್ಟ್ಯಾನ್ಲಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ನಿರ್ದೇಶಕರಾದ ರಾಯ್ ಡೇವಿಡ್, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ನಮಿತಾ, ಶ್ರೀಮತಿ ಕುಮಾರಿ, ಉμÁ, ಸಮಾಜ ಸೇವಕರಾದ ಲಕ್ಷ್ಮಿ ಪ್ರಸನ್ನ, ಮಕ್ಕಳ ವಿಶೇಷ ಪೆÇಲೀಸ್ ಘಟಕದ ಮೇಲ್ವೀಚಾರಕರಾದ ಸುಮತಿ, ವಿವಿಧ ಮಕ್ಕಳ ಪೆÇೀಷಣ ಸಂಸ್ಥೆಗಳ ಸದಸ್ಯರುಗಳು ಇತರರು ಇದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಸ್ವಾಗತಿಸಿ, ದಿವ್ಯ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ವತಿಯಿಂದ 2021 ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

error: Content is protected !!