ಕುಶಾಲನಗರದಲ್ಲಿ ಗಾಂಜಾ ಮಾರಾಟ ದಂಧೆ : ಮಾಲು ಸಹಿತ ಓರ್ವನ ಬಂಧನ

January 22, 2021

ಮಡಿಕೇರಿ ಜ.22 : ಕುಶಾಲನಗರ ಸುತ್ತ-ಮುತ್ತ ಹಾಗೂ ಶಾಲಾ ಕಾಲೇಜುಗಳ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಮಾಲು ಸಹಿತ ಕುಶಾಲನಗರ ಗ್ರಾಮಾಂತರ ಪೆÇಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೂಡುಮಂಗಳೂರು ಗ್ರಾಮದ ಬಸವನತ್ತೂರು ನಿವಾಸಿ ಚೇತನ್ (20) ಎಂದು ಗುರುತಿಸಲಾಗಿದ್ದು ಆತನಿಂದ ಆತನಿಂದ 1ಕೆ.ಜಿ.291ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಯಮಹಾ ಬೈಕ್, ಮೊಬೈಲ್ ಹಾಗೂ 700 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರಾಟ ದಂಧೆ ಬಗ್ಗೆ ದೊರೆತ ಖಚಿತ ಮಾಹಿತಿಯನ್ವಯ ಪೆÇಲೀಸರು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಸುಂದರನಗರ ಗ್ರಾಮದ ಜಂಕ್ಷನ್ ನಲ್ಲಿರುವ ಬಸ್ಸು ತಂಗುದಾಣದಲ್ಲಿ ಚೇತನ್ ಕಪ್ಪು ಬ್ಯಾಗ್ ನಲ್ಲಿ ಗಾಂಜಾ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.
ಜಿಲ್ಲಾ SP ಕ್ಷಮಾ ಮಿಶ್ರಾ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರುಗಳ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತದ ನಿರೀಕ್ಷಕ ಎಂ. ಮಹೇಶ್, ಗ್ರಾಮಾಂತರ ಠಾಣೆ ಪಿಎಸ್ ಐ ಶಿವಶಂಕರ್ ನೇತೃತ್ವದಲ್ಲಿ ಪೆÇ್ರಬೆಷನರಿ ಪಿಎಸ್ ಐ ಶ್ರವಣ.ಎಸ್.ಡಿ, ಎಎಸ್‍ಐ ಸ್ವಾಮಿ, ಸಿಬ್ಬಂದಿಗಳಾದ ಪ್ರಸನ್ನ, ದಯಾನಂದ, ಸಜಿ, ಎ.ಮಂಜುನಾಥ್, ವಿವೇಕ್, ರಾಫಿನ್ ಅಹಮ್ಮದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


error: Content is protected !!