ಪೊನ್ನಂಪೇಟೆಯಲ್ಲಿ ಕೌಶಲ್ಯ ತರಬೇತಿ ಅಭಿವೃದ್ಧಿ ಶಿಬಿರ : ಪದವಿಯ ಜೊತೆಗೆ ಕೌಶಲ್ಯ ಆಧಾರಿತ ತರಬೇತಿ ಪಡೆದುಕೊಳ್ಳಲು ಕರೆ

January 22, 2021

ಮಡಿಕೇರಿ ಜ. 22 : ವಿದ್ಯಾರ್ಥಿಗಳು ತಮ್ಮ ಪದವಿಯ ಜೊತೆಗೆ ಕೌಶಲ್ಯ ಆಧಾರಿತ ತರಬೇತಿಯನ್ನು ಕೂಡ ಪಡೆದು ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶ ಪಡೆದುಕೊಳ್ಳಬೇಕೆಂದು ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಸಿ ಪಿ. ಪೂವಯ್ಯ (ರಾಕೇಶ್) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಸ್ಕಿಲ್ ಬೌಟ್ ಸಂಸ್ಥೆಯಿಂದ 5 ದಿನಗಳ ಕೌಶಲ್ಯ ತರಬೇತಿ ಅಭಿವೃದ್ಧಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದೂರ ಊರುಗಳಾದ ಬೆಂಗಳೂರು ಮುಂತಾದಡೆ ಹೋಗಿ ಉದ್ಯೋಗವಕಾಶ ತರಬೇತಿ ಪಡೆಯುವುದು ಕಷ್ಠಕರ. ಆದುದರಿಂದ ಸಿಐಟಿ ಕ್ಯಾಂಪಸ್‍ನಲ್ಲಿಯೇ ತರಬೇತಿ ಪಡೆಯುವುದು ಸುಲಭ ಮತ್ತು ಉತ್ತಮ ಎಂದು ಹೇಳಿದರು.
ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿ ಮೊಹಮ್ಮದ್ ಇದ್ರಿಸ್ ಬೇಗ್ ಅವರು ಸಿಐಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದು, ಅವರು ಸ್ವಇಚ್ಚೆಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗಕ್ಕೆ ಅಣಿಪಡಿಸಲು ಬಂದಿರುವುದು ಅತ್ಯಂತ ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮಾತನಾಡಿ, ಉದ್ಯೋಗವಕಾಶ ಪಡೆಯಲು ಕೌಶಲ್ಯ ತರಬೇತಿಯ ಮಹತ್ವವನ್ನು ಹೇಳಿದರು.
ಸಂಸ್ಥೆಯಲ್ಲಿ ಮೌಲ್ಯಾಧಾರಿತ ಕೋರ್ಸ್‍ಗಳನ್ನು ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ವಿವರಿಸಿ ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲು ಸಹಾಯಕಾರಿಯಾಗುವುದು ಎಂದರು.
ಈ ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗ ಹಾಗೂ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಸ್ಕಿಲ್ ಬೌಟ್ ಸಂಸ್ಥೆಯ ಸಹಯೋಗದಿಂದ ಆಯೋಜಿಸಲಾಗಿದೆ.

error: Content is protected !!