ನೂತನ ಹಾಪ್ ಕಾಮ್ಸ್‍ನ ಕಟ್ಟಡಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ : ಪರಿಶೀಲನೆ

January 22, 2021

ಮಡಿಕೇರಿ ಜ.22ತೋಟಗಾರಿಕೆ ಇಲಾಖೆ ವತಿಯಂದ ನಗರದಲ್ಲಿ ನಿರ್ಮಾಣವಾಗಿರುವ ನೂತನ ಹಾಪ್ ಕಾಮ್ಸ್ ನ ಕಟ್ಟಡವನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ಪರಿಶೀಲನೆ ಮಾಡಿದರು
ನಂತರ ಮಾತನಾಡಿದ ಶಾಸಕರು ಹಿಂದೆ ಹಾಪ್ ಕಾಮ್ಸ್ ಕಟ್ಟಡ ಇಲ್ಲದ ಕಾರಣ ತೋಟಗರಿಕೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿತ್ತು. ಸ್ವಂತ ಕಟ್ಟದ ಕೊರತೆಯ ಇದ್ದ ಕಾರಣ ನಗರದ ಹೃದಯ ಭಾಗದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ರೈತರಿಗೆ ಅನುಕೂಲವಾಗಲು ದೃಷ್ಟಿಯಿಂದ ಇಲ್ಲಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ರೈತರು ಬೆಳೆದ ತೋಟಗಾರಿಕ ಬೆಳೆಗಳನ್ನು ನೇರವಾಗಿ ತರಲು ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ತೋಟಗಾರಿಕ ಉತ್ಪನ್ನಗಳನ್ನು ಇಲ್ಲಿ ಸಂಸ್ಕರಣೆ ಮಾಡಬಹುದಾಗಿದೆ. ಮತ್ತು ವಾರದಲ್ಲಿ ಒಂದು ದಿನ ಸಂತೆಯ ಮಾದರಿಯಲ್ಲಿ ರೈತರಿಗೆ ಅವಕಾಶವನ್ನು ನೀಡಲಾಗುತ್ತದೆ. ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಇದ್ದನ್ನು ನಿರ್ಮಿಸಲಾಗಿದೆ. ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ನ ಅಧ್ಯಕ್ಷರಾದ ರಮೇಶ್ ಚಂಗಪ್ಪ ಅವರು ಮಾತನಾಡಿ ಕಟ್ಟಡಕ್ಕೆ ರೂ.1.37 ಲಕ್ಷ ಮಂಜೂರಾತಿಯಾಗಿದೆ. ಕಟ್ಟದ ಕೆಲಸವು ಮುಗಿದಿದ್ದು ಮುಂದಿನ ದಿನಗಳಲ್ಲಿ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್, ಹಾಪ್ ಕಾಮ್ಸ್‍ನ ಉಪಾಧ್ಯಕ್ಷರಾದ ಮಧು ದೇವಯ್ಯ, ತೋಟಕಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಹಾಪ್ ಕಾಮ್ಸ್‍ನ ನಿರ್ದೇಶಕರಾದ ನಾಗೇಶ್ ಕುಂದಲ್‍ಪಾಡಿ, ಸತೀಶ್, ಮಹೇಶ್, ಬೇಬಿ ಪೂವಯ್ಯ, ಸುವೀನ್ ಗಣಪತಿ, ಹಾಪ್ ಕಾಮ್ಸ್‍ನ ಕಾರ್ಯದರ್ಶಿ ರೇμÁ್ಮ ಮತ್ತು ಇತರರು ಇದ್ದರು.