ವಿಶೇಷ ಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು : ನ್ಯಾಯಾಧೀಶೆ ನೂರುನ್ನೀಸಾ ಅಭಿಪ್ರಾಯ

January 22, 2021

ಮಡಿಕೇರಿ ಜ.22 : ವಿಶೇಷ ಚೇತನರು ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನರಾಗಿದ್ದಾರೆ. ಅವರನ್ನು ಎಲ್ಲಾ ಕ್ಷೇತ್ರಗಳಲ್ಲಿ, ಆರ್ಥಿಕವಾಗಿ ,ಸಾಮಾಜಿಕವಾಗಿ ,ಸಾಂಸ್ಕøತಿಕವಾಗಿ , ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ತರುವಂತ ಕೆಲಸವಾಗಬೇಕಿದೆ ಎಂದು ಹಿರಿಯಾ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸಾ ಅವರು ಹೇಳಿದರು.
ನಗರಸಭೆ ಮಡಿಕೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ದಿವ್ಯಾಂಗರ ಒಕ್ಕೂಟ(ರಿ) ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರ ವ್ಯಾಪ್ತಿಯ ದಿವ್ಯಾಂಗರ ದಿನಾಚರಣೆ ಪ್ರಯುಕ್ತ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ದಿವ್ಯಾಂಗರ ಆರೋಗ್ಯ ತಪಾಸಣೆ ಮತ್ತು ಕಾನೂನು ಅರಿವು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಡಿದರು.
6-18 ವರ್ಷದ ದಿವ್ಯಾಂಗ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗಿದೆ. ಕಾನೂನಿನಲ್ಲಿ ಎಲ್ಲಾರಂತೆ ಸಮಾನವಾದ ಬದುಕುವ ಹಕ್ಕಿದೆ. ಸರ್ಕಾರಿ ಹುದ್ದೆಗಳಲ್ಲಿ ವಿಕಲಚೇತನರಿಗೆ 4% ವಿನಾಯಿತಿಯನ್ನು ನೀಡಲಾಗಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ವಿಕಲ ಚೇತನತೆ ಒಂದು ಶಾಪ ಎಂದು ಭಾವಿಸಬೇಡಿ, ವಿಕಲಚೇತನರು ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ ಅಂತಹ ಸಾಧಕರ ಮಾರ್ಗದಲ್ಲಿ ನೀವು ಸಹ ಸಾಗಿ, ಸರ್ಕಾರದ ಹಲವು ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಿ ಎಂದು ಉತ್ಸಾಹದ ಮಾತುಗಳನ್ನಾಡಿದರು.
ವಿಕಲಚೇತನರಿಗೆ ಹಿಂಸೆ, ಕಿರಿಕುಳಗಳನ್ನು ಕೋಡುವುದು ಕಾನೂನು ಬಾಹಿರ, 2016 ರಿಂದ ವಿಕಲಚೇತನರಿಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು ಸ್ಥಳಿಯ ಪೆÇಲೀಸ್ ಠಾಣೆ ಅಥವಾ ನೇರವಾಗಿ ನ್ಯಾಯಾಲಯಕ್ಕೆ ಬಂದು ದೂರನ್ನು ನೀಡಬಹುದಾಗಿದೆ, ಕಾನೂನಿನ ಅರಿವು ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದು ನೂರುನ್ನೀಸ ಅವರು ತಿಳಿಸಿದರು.
ನಗರಸಭೆಯ ಪೌರಾಯುಕ್ತರಾದ ರಾಮದಾಸ್ ಅವರು ಮಾತನಾಡಿ ಪ್ರತಿಯೊಬ್ಬ ಅಂಗವಿಕಲರಿಗೆ ನಗರಸಭೆ ವತಿಯಿಂದ 5% ಅನುದಾನವನ್ನು ಮೀಸಲಿಡಲಾಗಿದೆ, ನಗರದಲ್ಲಿ 165 ವಿಶೇಷ ಚೇತನರು ಇದ್ದಾರೆ. ಅವರಿಗೆ ವಿಶೇಷ ಸೌಲಭ್ಯಗಳು ಇದ್ದು ಅದರ ಸದುಪಯೋಗ ಪದಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ವಿಶೇಷ ಚೇತನರಿಗೆ ಮನೆ ನಿರ್ಮಾಣಕ್ಕೆ 2.5 ಲಕ್ಷ ಪೆÇ್ರತ್ಸಾಹ ಧನವನ್ನು , ಜಾಗ ಖರೀದಿ ಮಾಡಲು 3 ಲಕ್ಷ, ಉನ್ನತ ಶಿಕ್ಷಣಕ್ಕಾಗಿ ಪೆÇ್ರತ್ಸಾಹ ಧನ, ಕೌಶಲ್ಯಾಭಿವೃದ್ದಿಗೆ ಸಹಾಯಧನ, ಶೌಚಾಲಯ ನಿರ್ಮಾಣಕ್ಕೆ 15 ಸಾವಿರ ಸಹಾಯಧನವನ್ನು ನಗರಸಭೆ ವತಿಯಿಂದ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು “ಸಾಧನೆ ಮಾಡುವುದಕ್ಕೆ ಆತ್ಮಶಕ್ತಿ ಇದ್ದರೆ ಸಾಕು ಸಾಧಿಸುವುದಕ್ಕೆ ಎಂದು ನುಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಲಚೇತನರಿಗೆ ನಗರ ಸಭೆ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಧಿಕಾರಿ ಡಾ.ಮಂಜುನಾಥ, ನಗರ ಆರೋಗ್ಯ ಕೇಂದ್ರದ ಡಾ.ಅಮೃತ, ಜಿಲ್ಲಾ ದಿವ್ಯಾಂಗರ ಒಕ್ಕೂಟದ ಅಧ್ಯಕ್ಷರಾದ ಮಹೇಶ್ ಇತರರು ಇದ್ದರು. ಪ್ರಾರ್ಥನೆಯನ್ನು ಈಶ್ವರಿ, ಲೋಹಿತ್ ಗೌಡ ಸ್ವಾಗತಿಸಿದರು. ಜಯಪ್ಪ ಅವರು ನಿರೂಪಿಸಿದರು.