ಲೈನ್‍ಮನೆಗಳಲ್ಲಿ ವಾಸಿಸುವ ಕುಟುಂಬಗಳು ನೋಂದಾಯಿಸಿಕೊಳ್ಳಲು ಮನವಿ

January 23, 2021

ಮಡಿಕೇರಿ ಜ.23 : ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳ ಸದಸ್ಯರು ಕೂಡ ಈ ದಾಖಲೆ ಮತ್ತು ಮಾಹಿತಿಯನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ತುರ್ತಾಗಿ ನೀಡುವಂತೆ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ಜಿ.ಗುರುಶಾಂತಪ್ಪ ಅವರು ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯ ಕಾಫಿ ಬೆಳೆಗಾರರ ತೋಟಗಳ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಜನಾಂಗದ ಲೈನ್‍ಮನೆ ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ಈಗಾಗಲೇ ನಡೆಸಲಾಗಿದ್ದು, ಕೆಲವು ಕುಟುಂಬಗಳು ಕೈಬಿಟ್ಟಿರುವುದು ತಿಳಿದು ಬಂದಿದೆ.
ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಇಲಾಖೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಮತ್ತು ಇತರೆ ಯೋಜನೆಗಳ ಸೌಲಭ್ಯ ಒದಗಿಸಿಕೊಡಲು ಕುಟುಂಬಗಳ ವಿಳಾಸ ಮತ್ತು ವಿವರ ಅಗತ್ಯವಿರುವುದರಿಂದ ಅವರುಗಳು ವಾಸಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಕೇಂದ್ರಗಳಲ್ಲಿ ಹೆಸರನ್ನು ನಮೂದಿಸಿ ಮಾಹಿತಿಗಳನ್ನು ಆಧಾರ್ ಕಾರ್ಡು, ರೇಷನ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ದೂರವಾಣಿ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ, ಚುನಾವಣಾ ಗುರುತಿನ ಚೀಟಿ ಈ ಎಲ್ಲಾ ದಾಖಲೆಗಳ ಪತ್ರಿಗಳನ್ನು ಪಂಚಾಯಿತಿಗೆ ನೀಡಲು ಕೋರಿದ್ದಾರೆ.

error: Content is protected !!