ಅರಂತೋಡುವಿನಲ್ಲಿ ಟಿ.ಎಂ.ಶಾಹೀದ್ ಸುವರ್ಣ ಸಂಭ್ರಮ

January 23, 2021

ಮಡಿಕೇರಿ ಜ.23 : ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ, ಕೃಷಿ, ವ್ಯಾಪಾರ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಕ್ರಿಯಾಶೀಲರಾಗಿರುವ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಾಹೀದ್ ಅವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮವನ್ನು ಅರಂತೋಡುವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ತೆಕ್ಕಿಲ್ ಮನೆಯಲ್ಲಿ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸಾಕ್ ಬಾವಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುವರ್ಣ ಸಂಭ್ರಮ ನಡೆಯಿತು.
ನಂತರ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಶಿಕ್ಷಕ ವೃಂದದೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಸಂಭ್ರಮದ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದರು. ಗುತ್ತಿಗಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ಅಭಿನಂದನಾ ಮಾತುಗಳನ್ನಾಡಿದರು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕರಣ್ ಅಡ್ಪಂಗಾಯ, ಗ್ರಾ.ಪಂ.ಸದಸ್ಯರಾದ ಜಿ.ಕೆ.ಹಮೀದ್, ಜಗದೀಶ್ ರೈ, ಲಸ್ಸಿಮೊನಾಲಿಸಾ, ದಿನಕರ ಸಣ್ಣಮನೆ, ದಯಾನಂದ ಕುರುಂಜಿ, ಕೆ.ಟಿ. ವಿಶ್ವನಾಥ್, ಕೆ.ಎಂ.ಮುಸ್ತಾಫಾ, ತಾಜ್ ಮಹ್ಮದ್ ಮತ್ತಿತರರು ಪಾಲ್ಗೊಂಡು ಶುಭಹಾರೈಸಿದರು.
ಶಾಲಾ ಮುಖ್ಯಸ್ಥರಾದ ವಾಣಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಚಾಲಕ ಅಶ್ರಫ್ ಗುಂಡಿ ವಂದಿಸಿದರು.
ನಂತರ ಕಲ್ಲುಗುಂಡಿ ಸಂತ ಪ್ರಾಸ್ಸಿಸ್ ಕ್ಲೇವಿಯರ್ ಚರ್ಚ್‍ನಲ್ಲಿ ನಡೆದ ಕಾರ್ಯಕ್ರಮಲ್ಲಿ ಟಿ.ಎಂ.ಶಾಹೀದ್ ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಫಾದರ್ ಪ್ಲಾವ್ ಕ್ರಾಸ್ತಾ ಜೀವನದಲ್ಲಿ ಉದ್ದೇಶವಿಲ್ಲದೆ ಬದುಕಬಾರದು, ಸಮಾಜಕ್ಕೆ ನಮ್ಮಿಂದ ಏನಾದರು ಕೊಡುಗೆ ನೀಡಬೇಕು ಎಂದರು.
ಟಿ.ಎಂ.ಶಾಹೀದ್ ಅವರು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಅವರ ಜಾತಿ ಧರ್ಮದ ಎಲ್ಲೆಯನ್ನು ಮೀರಿ ಸೌಹಾರ್ದತೆಯನ್ನು ಮೈಗೂಡಿಸಿ ಎಲ್ಲರೊಂದಿಗೆ ಬೆರೆತು ಜೀವನ ನಡೆಸುತ್ತಿರುವುದು ಸಂತೋಷದಾಯಕ ಎಂದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಲಸ್ಸಿಮೊನಾಲಿಸಾ, ಒನೇಸಿ ಮಾಸ್ ರೆಬೆಲ್ಲೊ ಕಲ್ಲುಗುಂಡಿ ಉಪಸ್ಥಿತರಿದ್ದರು.
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ, ಮತ್ಸ್ಯ ತೀರ್ಥಕ್ಕೆ ತೆರಳಿ ಮೀನುಗಳಿಗೆ ಆಹಾರ ನೀಡಿದರು. ಈ ಸಂದರ್ಭದಲ್ಲಿ ಯು.ಎಂ.ಶೇಷಗಿರಿ ಮಲ್ಲಡ್ಕ ಡಾ. ಎನ್.ಎ.ಜ್ಞಾನೇಶ್, ಡಾ. ಸಾಯಿಗೀತ, ಸದಾನಂದ ಮಾವಾಜಿ, ಧನುರಾಜ್ ಮತ್ತಿತರರು ಇದ್ದರು.
ನಂತರ ಶಾಹೀದ್ ವಲಿಯಲ್ಲಾಹಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅಜ್ಜ ತೆಕ್ಕಿಲ್ ಮಹ್ಮದ್ ಹಾಜಿ ಮತ್ತು ಕುಟುಂಬದವರ ರುದ್ರ ಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಸ್ಥಳೀಯ ಖತೀಬ್ ಸುಹೇಲ್ ದಾರಿಮಿ, ಝಕರಿಯಾ ದಾರಿಮಿ, ಕೆ.ಎಂ.ಮುಸ್ತಾಫ, ಟಿ.ಎಂ.ಬಾಬಾ ಹಾಜಿ ತೆಕ್ಕಿಲ್, ರಿಯಾಝ್ ಕಟ್ಟೆಕಾರ್, ರಜಾಕ್ ಹಾಜಿ ಮೊಟ್ಟೆಂಗಾರ್, ಅಶ್ರಫ್ ಗುಂಡಿ ಸಿದ್ಧಿಕ್, ಟಿ.ಎಂ. ಜಾವೇದ್ ತೆಕ್ಕಿಲ್ ಅಬ್ಬಾಸ್, ಮುಹಿದ್ದೀನ್ ಪ್ಯಾನ್ಸಿ, ಅಬ್ದುಲ್ ಖಾದರ್ ಪಠೇಲ್, ಕೆ.ಎಂ.ಮಹ್ಮದ್, ಅಬ್ದುಲ್ ಮಜೀದ್ ಸಿ.ಟಿ. ಮೆಡಿಕಲ್, ಹನೀಫ್, ಅಬೂಬಕ್ಕರ್ ಪಾರೆಕ್ಕಲ್, ರಿಯಾಝ್ ಕಲ್ಲುಗುಂಡಿ, ಅಮೀರ್ ಕುಕ್ಕುಂಬಳ, ಎಸ್.ಎಂ.ಹಂಸ, ಹಕ್ಕೀಮ್ ಮೊಟ್ಟೆಂಗಾರ್ ಪಾಲ್ಗೊಂಡಿದ್ದರು.

ಹಣ್ಣು ಹಂಪಲು ವಿತರಣೆ : ಸಂಜೆ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಟಿ.ಎಂ.ಶಾಹೀದ್, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಈ ಸಂದರ್ಭ ಸುಳ್ಯ ಗೌಡರ ಯುವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಶಾಹೀದ್ ಅವರಿಗೆ ಶುಭಕೋರಿದರು.
ಸುಳ್ಯ ತಾಲ್ಲೂಕು ವೈದ್ಯಾಧಿಕಾರಿ ಡಾ. ಕರುಣಾಕರ, ಕರ್ನಾಟಕ ಸರಕಾರದ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ, ಸದಾನಂದ ಮಾವಜಿ, ಕೆ.ಎಂ.ಮುಸ್ತಾಫ, ದಿನೇಶ್ ಮಡ್ತಿಲ, ಪಿ.ಎ.ಮಹ್ಮದ್, ಶರೀಫ್ ಕಂಠಿ, ಅಶ್ರಫ್ ಗುಂಡಿ, ಟಿ.ಎಂ.ಜಾವೇದ್ ತೆಕ್ಕಿಲ್, ಸಿದ್ಧಿಕ್ ಕೊಕ್ಕೊ, ಮುರಳಿ, ರಿಯಾಜ್ ಕಟ್ಟೆಕಾರ್, ಅಬ್ದುಲ್ ಮಜೀದ್ ಹನೀಫ್, ತಾಜುದ್ದೀನ್ ಇದ್ದರು.
ಇದೇ ಸಂದರ್ಭದಲ್ಲಿ ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮತ್ತು ಉಪಾಧ್ಯಕ್ಷ ದಯಾನಂದ ಕುರುಂಜಿ, ಪಠೇಲ್ ಚಾರಿಟೇಬಲ್ ಟ್ರಸ್ಟ್ ನ ಪರವಾಗಿ ಅಬ್ದುಲ್ ಖಾದರ್ ಪಠೇಲ್, ಅನ್ವಾರುಲ್ ಹುದಾ ಅಸೋಷಿಯೇಶನ್ ಪರವಾರಗಿ ಅಬ್ದುಲ್ ಮಜೀದ್ ಮತ್ತು ಧನಂಜಯ ಅಡ್ಪಂಗಾಯರ ಪರವಾಗಿ ಪುತ್ರ ಕರಣ್ ಅಡ್ಪಂಗಾಯ ಅವರು ಟಿ.ಎಂ.ಶಾಹೀದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

error: Content is protected !!