ಕ್ರಿಕೆಟ್ ಪಂದ್ಯಾವಳಿ : ಜ.24 ರಂದು ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ

23/01/2021

ಮಡಿಕೇರಿ ಜ.23 : ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸಂಘದ ವತಿಯಿಂದ ಮೂರನೇ ವರ್ಷದ ಎಂ.ಪಿ.ಎಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ.6 ರಿಂದ 9ರ ವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾವಳಿಯ ಪೂರ್ವಭಾವಿಯಾಗಿ ಪ್ರೀಮಿಯರ್ ಲೀಗ್‍ನ ಹರಾಜು ಪ್ರಕ್ರಿಯೆ ಮಡಿಕೇರಿಯ ಆಲ್‍ವೆಸೆಲ್ ಹೊಟೇಲ್ ಸಭಾಂಗಣದಲ್ಲಿ ಜ.24 ರಂದು ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಸ್ಟನ್ ಸಂಘದ ಸದಸ್ಯ ಎನ್.ಬಿ. ಹ್ಯಾರಿಸ್ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಭಾನುವಾರ ಬೆಳಿಗ್ಗೆ 11 ಗಂಟೆಗೆ ಐಕಾನ್ ಆಟಗಾರರು ಹಾಗೂ ಸಂಜೆ 5 ಗಂಟೆಗೆ ಉಳಿದ ಆಟಗಾರರ ಹಾರಜು ಪ್ರಕ್ರಿಯೆ ನಡೆಯಲಿದೆ. ಎಂಬಿಎಲ್ ಪಂದ್ಯಾವಳಿಗೆ ಈಗಾಗಲೇ ಹತ್ತು ತಂಡಗಳ ಮಾಲೀಕರು ಸಜ್ಜಾಗಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ರೋಚಕ ಪಂದ್ಯಾವಳಿಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 60 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ದ್ವೀತಿಯ ಸ್ಥಾನ ಗಳಿಸಿದ ತಂಡಕ್ಕೆ 40 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದೆಂದು ಹ್ಯಾರಿಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಎಂ.ರಶೀದ್, ಕಾರ್ಯದರ್ಶಿ ಶಮ್ನಾನ್ ಷರೀಫ್, ಸ್ಥಾಪಕ ಅಧ್ಯಕ್ಷ ಎಂ.ಹೆಚ್. ಕಬೀರ್, ಸದಸ್ಯರುಗಳಾದ ಎಂ.ಎಂ.ಉಬೈದ್, ಎಂ.ಎಂ.ಶಾಹಿದ್ ಉಪಸ್ಥಿತರಿದ್ದರು.