ಮೇಕೇರಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ ಪರಾಕ್ರಮ್ ದಿವಸ್

January 23, 2021

ಮಡಿಕೇರಿ ಜ.23 : ಮೇಕೇರಿಯ ಸ್ವಾಗತ ಯುವಕ ಸಂಘ ಹಾಗೂ ಸುಭಾಸ್ ಯುವ ಸಮಿತಿ ಸಂಯುಕ್ತಾಶ್ರಯದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸರ 124ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮೇಕೇರಿಯ ಸುಭಾಸ್ ನಗರದ ಸುಭಾಸ್ ಚಂದ್ರ ಬೋಸ್ ಸಾರ್ವಜನಿಕ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು ಹಾಗೂ ಕಾರ್ಯಕರ್ತರು ಸುಭಾಸ್ ಚಂದ್ರ ಬೋಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಹಿ ಹಂಚಿದರು.
ಸ್ವಾಗತ ಯುವಕ ಸಂಘದ ಅಧ್ಯಕ್ಷ ಜೆ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಟಿ.ವಿ.ಲೋಕೇಶ್ ಹಾಗೂ ಸಂಘದ ಗೌರವಾಧ್ಯಕ್ಷ ಪಿ.ಎಂ ದಾಮೋದರ್ ಉದ್ಛಾಟಿಸಿದರು.
ನಂತರ ಮಾತನಾಡಿದ ಪಿ.ಎಂ. ದಾಮೋದರ್, ಸುಭಾಸ್ ಚಂದ್ರ ಬೋಸರ ಬದುಕಿನ ಆದರ್ಶ ಹಾಗೂ ಕೆಚ್ಚೆದೆಯ ಹೋರಾಟಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಂಘದ ಸದಸ್ಯ ಓಡಿಯನ ಚಂದನ್ ಮಾತನಾಡಿ, ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆಯುವುದಕ್ಕಾಗಿ ತೀವ್ರಗಾಮಿ ಹೋರಾಟ ನಡೆಸಿದ ಅಪ್ರತಿಮ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸರ ಹೋರಾಟದ ಬಗ್ಗೆ ವಿವರಿಸಿದರು.
ಈ ಸಂದರ್ಭ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

error: Content is protected !!