ಜೆಡಿಎಸ್ ವೀಕ್ಷಕರಾಗಿ ಕೆ.ಎಂ.ಗಣೇಶ್ ನೇಮಕ

January 23, 2021

ಮಡಿಕೇರಿ ಜ.23 : ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ವೀಕ್ಷಕರನ್ನು ನೇಮಿಸಲಾಗಿದ್ದು, ಪಕ್ಷದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರಿಗೂ ಸ್ಥಾನ ದೊರೆತ್ತಿದೆ.
ಜೆಡಿಎಸ್ ಬಲವರ್ಧನೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಮೈಸೂರು ಹಾಗೂ ಬೆಂಗಳೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗಗಳಿಗೆ ವೀಕ್ಷಕರನ್ನು ನೇಮಿಸಲಾಗಿದೆ. ಮಾಜಿ ಸಚಿವ ಟಿ.ಟಿ.ನಿಂಗಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕರುಗಳಾದ ಹೆಚ್.ಎಸ್.ಶಿವಶಂಕರ್, ಶಾರದಾ ನಾಯಕ್, ವೈ.ಎಸ್.ವಿ ದತ್ತ, ಕೊಡಗಿನ ಕೆ.ಎಂ.ಗಣೇಶ್, ಪ್ರಮುಖರಾದ ಅಜಿತ್ ರಂಜನ್‍ಕುಮಾರ್, ಡಿ.ಯಶೋಧರ, ಎಂ.ಶ್ರೀಕಾಂತ್, ಹೆಚ್.ಹೆಚ್.ದೇವರಾಜ್, ಹೆಚ್.ಟಿ.ಬಳಿಗಾರ್, ಕೆ.ಎನ್.ರಾಮಕೃಷ್ಣ, ನಜ್ಮಾ ನಜೀರ್, ಹೊದಿಗೆರೆ ರಮೇಶ್, ರವೀಶ್, ಜೆ.ಅಮನುಲ್ಲಾಖಾನ್, ಎಂ.ರಾಮಚಂದ್ರಪ್ಪ ಅವರುಗಳು ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.