ಕಬ್ಬಿಣದ ಶೀಟ್‍ಗಳ ಕಳವು : ಮಡಿಕೇರಿಯಲ್ಲಿ ನಾಲ್ವರ ಬಂಧನ : 2 ಆಟೋರಿಕ್ಷಾಗಳು ವಶ

January 23, 2021

ಮಡಿಕೇರಿ ಜ.23 : ನೂತನವಾಗಿ ಕಟ್ಟಡ ನಿರ್ಮಿಸುತ್ತಿದ್ದ ಸ್ಥಳದಿಂದ ಸುಮಾರು 1.61ಲಕ್ಷ ರೂ. ಮೌಲ್ಯದ ಕಬ್ಬಿಣದ ಶೀಟ್‍ಗಳನ್ನು ಕಳವು ಮಾಡಿದ ಆರೋಪದಡಿ ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಡಿಕೇರಿ ರಾಜರಾಜೇಶ್ವರಿ ನಗರದ ಎಂ.ವಿ.ಮಿಕ್‍ತ್ವಾದ್ (24), ಆಜಾದ್‍ನಗರದ ಎಂ.ಯು.ಖಾದರ್ (24), ಹೆಬ್ಬೆಟ್ಟಗೇರಿಯ ಆಟೋ ಚಾಲಕ ಸಿ.ಟಿ.ಪವನ್(25) ಹಾಗೂ ಮಕಾನ್ ಗಲ್ಲಿಯ ಜುಲ್ಫಿಕರ್ (24) ಎಂದು ಗುರುತಿಸಲಾಗಿದೆ.
ಹೊಸದಾಗಿ ಕಟ್ಟಡ ನಿರ್ಮಿಸುತ್ತಿದ್ದ ಸ್ಥಳದಿಂದ 230 ಕಬ್ಬಿಣದ ಶೀಟ್‍ಗಳು ಕಳವಾಗಿರುವುದಾಗಿ ಮಡಿಕೇರಿ ನಗರ ಠಾಣೆಗೆ ನೀಡಿದ ದೂರಿನ ಅನ್ವಯ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಉಪ ಅಧೀಕ್ಷಕ ಬಿ.ಪಿ.ದಿನೇಶ್‍ಕುಮಾರ್ ಮಾರ್ಗದರ್ಶನ ಮತ್ತು ನಗರ ವೃತ್ತದ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಈ ತಂಡವು ತನಿಖೆ ಆರಂಭಿಸಿದಾಗ ನಗರದ ಮುತ್ತಪ್ಪ ದೇವಾಲಯದ ಬಳಿಯಿಂದ ಹಾಗೂ ಅಬ್ದುಲ್ ಕಲಾಂ ಲೇಔಟ್‍ನಿಂದ 230 ಕಬ್ಬಿಣದ ಶೀಟ್‍ಗಳನ್ನು ಕಳವು ಮಾಡಿರುವ ಆರೋಪಿಗಳ ಸುಳಿವು ಪತ್ತೆಯಾಗಿತ್ತು. ಅವರಿಂದ 1.61ಲಕ್ಷ ರೂ. ಮೌಲ್ಯದ 230 ಕಬ್ಬಿಣದ ಕಾಂಕ್ರಿಟ್ ಶೀಟ್‍ಗಳನ್ನು, ಅವುಗಳನ್ನು ಕಳ್ಳತನ ಮಾಡಲು ಉಪಯೋಗಿಸಿದ ಎರಡು ಆಟೋರಿಕ್ಷಾಗಳನ್ನು ವಶಪಡಿಸಿಕೊಂಡಿದೆ.
ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಠಾಣೆ ಉಪ ನಿರೀಕ್ಷಕಿ ಎಂ.ಟಿ.ಅಂತಿಮಾ, ಎಎಸ್‍ಐ ಗೋವಿಂದರಾಜು, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ್, ಬಿ.ಕೆ.ಪ್ರವೀಣ್, ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಬಿ.ಜಿ.ಅರುಣ್‍ಕುಮಾರ್, ಬಿ.ಒ. ಸುನಿಲ್, ಕೆ.ಎಂ.ಧರ್ಮ,ಎ.ಆರ್. ಮನು, ದಿವ್ಯಾ, ಓಮನ, ಭವಾನಿ, ಜಿಲ್ಲಾ ಪೊಲೀಸ್ ಕಚೇರಿಯ ಸಿ.ಕೆ.ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.

error: Content is protected !!