ವಿರಾಜಪೇಟೆಯಲ್ಲಿ ನಿಲ್ಲದ ಲಾಟರಿ ದಂಧೆ : ಪೊಲೀಸರ ದಾಳಿ : ಐವರ ಬಂಧನ

ವಿರಾಜಪೇಟೆ ಜ.23 : ಕೇರಳ ರಾಜ್ಯದ ಲಾಟರಿ ಟಿಕೆಟ್ಗಳ ಕೊನೆ ಅಂಕಿಯ ಮೇಲೆ ಬಾಜಿ ಕಟ್ಟಿ ಜೂಜಿನಲ್ಲಿ ತೊಡಗಿದ್ದ ಐವರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆ ಪಟ್ಟಣದ ಹಣ್ಣು ವ್ಯಾಪಾರಿ ಅಂತೋಣಿ(40), ಮಣಿ ಪಾಲಕ್ಕಾಡ್(49), ತೆಲುಗರ ಬೀದಿ ನಿವಾಸಿ ತರಕಾರಿ ವ್ಯಾಪಾರಿ ಟಿ.ಎನ್ ಪ್ರಕಾಶ್(43), ಸುಣ್ಣದ ಬೀದಿ ನಿವಾಸಿ ಪ್ಲಾಸ್ಟಿಕ್ ವ್ಯಾಪಾರಿ ಸಮೀರ್(42) ಮತ್ತು ಪೆರುಂಬಾಡಿ ಗ್ರಾಮದ ನಿವಾಸಿ ಪಿಗ್ಮಿ ಸಂಗ್ರಹಗಾರ ಮಣಿಕಂಠ(37) ಬಂಧಿತ ಆರೋಪಿಗಳು.
ವಿರಾಜಪೇಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಅಂಗಡಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮ ಜೂಜಿನಲ್ಲಿ ತೊಡಗಿದ್ದಾರೆ ಎಂದು ನಗರ ಠಾಣೆಯ ಅಪರಾಧ ವಿಭಾಗದ ಉಪ ನೀರಿಕ್ಷಕರಿಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಧಾಳಿ ನಡೆಸಿದರು. ರೂ.7,700 ನಗದು ಸೇರಿದಂತೆ ಮೂರು ಮೊಬೈಲ್ ಹಾಗೂ ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಶ್ರೀಧರ್ ಅವರ ನಿರ್ದೇಶನದಲ್ಲಿ ವಿರಾಜಪೇಟೆ ನಗರ ಪೊಲೀಸ್ ಉಪ ನೀರಿಕ್ಷಕ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ಉಪ ನೀರಿಕ್ಷಕÀ ಹೆಚ್.ಎಸ್.ಬೋಜಪ್ಪ, ಸಿಬ್ಬಂದಿಗಳಾದ ಗಿರೀಶ್, ಮುಸ್ತಫ, ಮಧು ಟಿ.ಟಿ. ಹಾಗೂ ಚಾಲಕ ಪೂವಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕೆ.ಕೆ.ಎಸ್ ವಿರಾಜಪೇಟೆ