ಮೈಸೂರು ಕ್ಯಾಥೋಲಿಕ್ ಅಸೋಸಿಯೇಷನ್ ನಿಂದ ಕೊಡಗಿನ ಗ್ರಾ.ಪಂ ಸದಸ್ಯರುಗಳಿಗೆ ಸನ್ಮಾನ

January 23, 2021

ಮಡಿಕೇರಿ ಜ.23 : ಮೈಸೂರಿನ ಕ್ಯಾಥೋಲಿಕ್ ಅಸೋಸಿಯೇಷನ್ ನ 75ನೇ ವರ್ಷದ ಸಂಭ್ರಮದ ಪ್ರಯುಕ್ತ ಗ್ರಾ.ಪಂ ನ ಕ್ರೈಸ್ತ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಕೊಡಗಿನ ಪದಾಧಿಕಾರಿಗಳಾದ ಜಾನ್ಸನ್ ಪಿಂಟೋ ಕರ್ಣಂಗೇರಿ, ಜಯರಾಜ್ ಮದೆನಾಡು, ಫಿಲೋಮಿನಾ ಕೂಡಿಗೆ, ಸೆಬಾಸ್ಟಿಯನ್ ಸುಂಟಿಕೊಪ್ಪ, ಜೋವಿಟಾ ಸೋನಿಯಾ ಆರ್ಜಿ, ಅನೂಪ್ ಜೋಸೆಫ್ ಆರ್ಜಿ ಹಾಗೂ ಬೆನ್ನಿ ಅಗಸ್ಟಿನ್ ಅವರುಗಳನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ಧರ್ಮಗುರುಗಳು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.