ಕುಶಾಲನಗರ ಡಾ.ಪ್ರಕಾಶ್ ಬಡುವನಹಳ್ಳಿ ನುಡಿನಮನ ಕಾರ್ಯಕ್ರಮ

January 24, 2021

ಮಡಿಕೇರಿ ಜ.24 :ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಬಳಗ ಹಾಗೂ ಡಾ.ಪ್ರಕಾಶ್ ಬಡವನಹಳ್ಳಿ ಗೆಳಯರ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‍ನ ಸುವರ್ಣ ಮಹೋತ್ಸವ ಭವನದಲ್ಲಿ ಯುವ ಸಾಹಿತಿ, ವಿಮರ್ಶಕರೂ ಆಗಿದ್ದು, ಅಕಾಲಿಕ ಮರಣ ಹೊಂದಿದ ಪ್ರಾಧ್ಯಾಪಕ ಡಾ.ಪ್ರಕಾಶ್ ಬಡುವನಹಳ್ಳಿ ಅವರ ನುಡಿನಮನ ಕಾರ್ಯಕ್ರಮ ಜರುಗಿತು.
ಡಾ.ಪ್ರಕಾಶ್ ಅವರ ಬದುಕು ಮತ್ತು ಬರಹ ಕುರಿತು ಮಾತನಾಡಿದ ಹಿರಿಯ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ, ಕೊರೋನಾದ ತಲ್ಲಣ ಬಹಳಷ್ಟು ಅಮೂಲ್ಯವಾದ ಜೀವಗಳನ್ನು ಬಲಿ ತೆಗೆದುಕೊಂಡಿತು. ಇದರ ಹಿಂದೆ ಮಾಧ್ಯಮಗಳು ಜನರಲ್ಲಿ ಹುಟ್ಟುಹಾಕಿದ ಭಯ ಭೀಕರವಾದುದು ಎಂದರು.
ಇಂಥಹ ಭೀಕರತೆ ಸಾಲಿಗೆ ಯುವ ವಿಮರ್ಶಕ ಡಾ ಪ್ರಕಾಶ್ ಕೂಡ ಬಲಿಯಾದುದು ದುರ್ದೈವದ ಸಂಗತಿ ಎಂದು ಪೆÇ್ರ.ಸಿದ್ಧರಾಮಯ್ಯ ಹೇಳಿದರು.
ಡಾ ಪ್ರಕಾಶ್ ಒಬ್ಬ ನಿಷ್ಠ ಅಧ್ಯಯನಶೀಲ ಅಧ್ಯಾಪಕರಾಗಿದ್ದರು. ನಿರಂತರ ಓದಿನ ಮೂಲಕ ಶ್ರೇಷ್ಠ ಅಧ್ಯಾಪಕನಾಗುವುದು ಸಾಧ್ಯ ಎಂಬುದನ್ನು ಡಾ ಪ್ರಕಾಶ್ ಸಾಬೀತುಪಡಿಸಿದ್ದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ಸ್ನೇಹಿಜೀವಿ, ಹೃದಯವಂತಿಕೆಯುಳ್ಳ ಯುವ ವಿದ್ವಾಂಸರಾಗಿದ್ದ ಡಾ ಬಿ.ಪ್ರಕಾಶ್ ಅವರು ವಿದ್ವತ್ತು, ಜಾತ್ಯತೀತ ತತ್ವ, ವೈಚಾರಿಕತೆ ಚಿಂತನೆ, ಇಂದಿನ ಯುವ ಜನಾಂಗಕ್ಕೆ ಮಾದರಿಯಾದದು ಎಂದರು.
ಡಾ ಪ್ರಕಾಶ್ ಅವರ ಅಧ್ಯಯನ ಅಕ್ಷರವನ್ನು ಮೀರಿದ ಚಿಂತನೆಯಾಗಿತ್ತು. ಸಮಚಿತ್ತದಿಂದ ಬದುಕನ್ನು ಎದುರಿಸುವ ಶಕ್ತಿ ಅವರಿಗಿತ್ತು. ಪ್ರಕಾಶ್ ಅವರಷ್ಟೇ ಪ್ರತಿಭಾವಂತರಾದ ಅವರ ಮಡದಿ ಡಾ ಸುಕನ್ಯಾ ಸಾಹಿತ್ಯದ ಬದುಕಿನ ಬಂಡಿಯನ್ನು ಸಮರ್ಥವಾಗಿ ಎಳೆಯುವಂತಾಗಲಿ ಎಂದು ದಳವಾಯಿ ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಸಂವೇದನಾಶೀಲ ಚಿಂತಕ ಡಾ ಪ್ರಕಾಶ್ ಅವರ ಸಾಹಿತ್ಯ ಚಿಂತನೆಯನ್ನು ಮುಂದುವರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದರು.
ಡಾ ರಹಿಮತ್ ತರೀಕೆರೆ ಅವರು ಡಾ.ಪ್ರಕಾಶ್ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಕುರಿತು ತಯಾರಿಸಿದ ವಿಡಿಯೋ ತುಣಕನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಸುಕನ್ಯಾ ಪ್ರಕಾಶ್, ಡಾ.ಎಚ್.ಆರ್.ಸ್ವಾಮಿ, ಡಾ ಬಿ.ಎಸ್.ಪ್ರಭು,ವಿ.ಪಿ.ಶಶಿಧರ್, ಡಾ ಡಿ.ದೇವರಾಜ್, ಪುಟ್ಟರಾಜ್, ಎಂ.ನಂಜುಂಡಸ್ವಾಮಿ, ರೋಹಿತ್, ವೆಂಕಟನಾಯಕ್, ಸಾಗರ್ ತೊರೆನೂರು ಅವರು ಡಾ ಪ್ರಕಾಶ್ ಅವರ ಸಾಹಿತ್ಯದ ಕುರಿತು ಮಾತನಾಡಿದರು.
ಪ್ರಾಂಶುಪಾಲ ಡಾ ಜೆ.ಸೋಮಣ್ಣ, ಪ್ರಾಸ್ತಾವಿಕವಾಗಿ ಮಾತನಾಡಿ ವೈಚಾರಿಕ ಚಿಂತಕ ಸ್ನೇಹಿಜೀವಿಯಾಗಿದ್ದ ಡಾ ಪ್ರಕಾಶ್ ಅವರು ಸಾಹಿತ್ಯ ರಚನೆಯ ನೆನಪು ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಭಾರದ್ವಾಜ ಕೆ.ಆನಂದತೀರ್ಥ, ಬಳಗದ ಉಪಾಧ್ಯಕ್ಷ ಎಂ.ಇ.ಮೊಯಿದ್ದೀನ್ ಬಿ.ನಂಜಪ್ಪ, ಯು.ಎಸ್.ಮಹೇಶ್ ಹಾಜರಿದ್ದರು.
ಪ್ರಾಧ್ಯಾಪಕಿ ಡಾ ರಾಶಿ ಪುಟ್ಟರಾಜು ನಿರ್ವಹಿಸಿದರು. ಬಳಗದ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್ ಸ್ವಾಗತಿಸಿದರು. ನಿರ್ದೇಶಕ ಟಿ.ಜಿ.ಪ್ರೇಮಕುಮಾರ್ ವಂದಿಸಿದರು.

error: Content is protected !!