ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ : ವಾರ್ಷಿಕ ಪ್ರಶಸ್ತಿ ಪ್ರದಾನ

January 25, 2021

ಮಡಿಕೇರಿ ಜ. 25 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ 2019ನೇ ಸಾಲಿನ 17 ವಿಭಾಗದ ವಾರ್ಷಿಕ ಪ್ರಶಸ್ತಿಯನ್ನು 12 ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತೋಟಗಾರಿಕಾ ಪ್ರಶಸ್ತಿ ವಿಭಾಗದಲ್ಲಿ ಶಕ್ತಿ ಪತ್ರಿಕೆಯ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ಹಾಗೂ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಐಮಂಡ ಗೋಪಾಲ್ ಸೋಮಯ್ಯ ಭಾಜನರಾದರು.
ರಾಜಕೀಯ, ಹುಲಿ ಸಂರಕ್ಷಣೆ ಪ್ರಶಸ್ತಿಗೆ ವಿಜಯವಾಣಿಯ ಸಣ್ಣುವಂಡ ಕಿಶೋರ್ ನಾಚಪ್ಪ, ಕೃಷಿ, ಮಾನವೀಯ ವರದಿ ಪ್ರಶಸ್ತಿಗೆ ವಿಜಯವಾಣಿಯ ಪಳೆಯಂಡ ಪಾರ್ಥ ಚಿಣ್ಣಪ್ಪ. ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್‍ನ ಬಾಚರಣಿಯಂಡ ಅನುಕಾರ್ಯಪ್ಪ, ಗ್ರಾಮೀಣ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯದ ಹಿರಿಕರ ರವಿ, ಕ್ರೀಡಾ ವರದಿ, ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾವಾಣಿಯ ರೆಜಿತ್‍ಕುಮಾರ್, ಅತ್ಯುತ್ತಮ ವಿಡಿಯೋಗ್ರಾಫಿ ಪ್ರಶಸ್ತಿಯನ್ನು ಚಿತ್ತಾರ ವಾಹಿನಿಯ ವಿಶ್ವ ಕುಂಬೂರು, ಆರೋಗ್ಯ ವರದಿ, ಫೆÇೀಟೋಗ್ರಾಫಿ ಪ್ರಶಸ್ತಿಯನ್ನು ಹೆಚ್.ಜೆ.ರಾಕೇಶ್, ಪರಿಸರ ಮತ್ತು ನೈರ್ಮಲ್ಯ ಪ್ರಶಸ್ತಿಯನ್ನು ವಾರ್ತಾಭಾರತಿ ಪತ್ರಿಕೆಯ ಮುಸ್ತಫಾ, ಹೈನುಗಾರಿಕೆ ಪ್ರಶಸ್ತಿಯನ್ನು ಕನ್ನಡಪ್ರಭ ವರದಿಗಾರ ಆರ್.ಸುಬ್ರಮಣಿ, ಶೈಕ್ಷಣಿಕ ಪ್ರಶಸ್ತಿಯನ್ನು ಕನ್ನಡಪ್ರಭದ ವಿಘ್ನೇಶ್ ಭೂತನಕಾಡು, ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ಪ್ರಶಸ್ತಿಯನ್ನು ಐಮಂಡ ಗೋಪಾಲ್ ಸೋಮಯ್ಯ ಪಡೆದುಕೊಂಡರು.
ಪ್ರಶಸ್ತಿಗನ್ನು ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮತ್ತಿತರ ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ರಾಷ್ಟ್ರ ಸಮಿತಿ ಸದಸ್ಯ ಮುರುಳೀಧರ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಂಘದ ಉಪಾಧ್ಯಕ್ಷರಾದ ಆದಿತ್ಯ, ಪಾರ್ಥಚಿಣ್ಣಪ್ಪ,ಮಹೇಶ್, ಕಾರ್ಯದರ್ಶಿ ಹೆಚ್.ಕೆ. ಜಗದೀಶ್, ವಾಸು, ಖಜಾಂಚಿ ಪ್ರೇಮ್,ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಹರೀಶ್ ಪಾಲ್ಗೊಂಡಿದ್ದರು.

error: Content is protected !!