ಬೆಂಗಳೂರಿನಲ್ಲಿ ರೈತರ ಪರೇಡ್ ಗೆ ಟ್ರ್ಯಾಕ್ಟರ್ ಸಂಖ್ಯೆ ಕಡಿತಗೊಳಿಸಲು ರೈತ ಸಂಘಗಳಿಂದ ಚಿಂತನೆ

January 25, 2021

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜನವರಿ 26 ರಂದು ಬೆಂಗಳೂರಿನಲ್ಲೂ ಟ್ರ್ಯಾಕ್ಟರ್‌ ಪರೇಡ್‌ ನಡೆಸಲು ರಾಜ್ಯ ರೈತ ಸಂಘಟನೆಗಳು ನಿರ್ಧಾರ ಮಾಡಿದರೂ ಟ್ರ್ಯಾಕ್ಟರ್‌ಗಳ ಸಂಖ್ಯೆ ಕಡಿತಗೊಳಿಸಲು ಚಿಂತನೆ ನಡೆಸಿವೆ. ಆರಂಭದಲ್ಲಿ ಸುಮಾರು 2000 ಟ್ರ್ಯಾಕ್ಟರ್‌ಗಳ ಜೊತೆಗೆ ಮೆರವಣಿಗೆ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ ಪೊಲೀಸರ ಮನವಿ ಮೇರೆ 300 ರಿಂದ 500 ರಷ್ಟು ಟ್ರ್ಯಾಕ್ಟರ್‌ಗಳು ಪರೇಡ್‌ನಲ್ಲಿ ಭಾಗಿಯಾಗಲಿವೆ.

ಬೆಂಗಳೂರಿನ ಐದು ದಿಕ್ಕುಗಳಿಂದ ಸುಮಾರು 2000 ಟ್ರ್ಯಾಕ್ಟರ್‌ಗಳ ಮೂಲಕ ಬೆಂಗಳೂರು ನಗರದಲ್ಲಿ ಪರೇಡ್ ನಡೆಸಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಈ ಕುರಿತಾಗಿ ರಾಜ್ಯ ರೈತ ಸಂಘಟನೆಗಳ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

error: Content is protected !!